ಬಂಟ್ವಾಳ : ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ.) ಬೊಳ್ಳಾಯಿ ಸಜೀಪಮೂಡ ಇದರ ವಾರ್ಷಿಕ ಮಹಾಸಭೆ ಸೆ. 8ರಂದು ಸುಭಾಷ್ ನಗರ ಶ್ರೀ ಗುರು ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಂಘವು 15 ಶಾಖೆಗಳ ಸಹಿತ 14,150 ಸದಸ್ಯರನ್ನು ಹೊಂದಿದೆ., 258 ಕೋಟಿ ರೂ. ವ್ಯವಹಾರದ ದಾಖಲೆ ಮಾಡಿದೆ. 2023 – 24 ನೇ ಸಾಲಿನಲ್ಲಿ ರೂ. 20.06 ಲಕ್ಷ ಲಾಭ ಪಡೆದಿದೆ. ತನ್ನ ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡುವುದಾಗಿ ತಿಳಿಸಿದರು.

ಸಹಕಾರಿಯು ಜಿಲ್ಲಾ ಮಟ್ಟಕ್ಕೆ ಏರಿದೆ. ಮುಂದಿನ ಹಂತದಲ್ಲಿ ರಾಜ್ಯ ಮಟ್ಟಕ್ಕೆ ವಿಸ್ತರಿಸುವುದು. ಜೊತೆಗೆ 25 ಶಾಖೆಗಳ ಗುರಿ ಹೊಂದಲಾಗಿದೆ ಎಂದರು. ಸಮಾಜದ ಬಡ ಜನರ ಉದ್ದಾರ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಹಕಾರಿಯ ಉದ್ದೇಶ ಎಂದರು.

ನ್ಯಾಯವಾದಿ ಚಿದಾನಂದ ಕಡೇಶಿವಾಲಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಿಂದ ಮುಖ್ಯ ಅತಿಥಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ತೆಂಗು ಸಹಕಾರಿಯ ಅಧ್ಯಕ್ಷ ರಾಜ್ ಬಂಟ್ವಾಳ್ ಮಾತನಾಡಿದರು.

ಒಟ್ಟು 180 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಹಿರಿಯ ಮೂರ್ತೆದಾರರಾದ ನೋಣಯ್ಯ ಪೂಜಾರಿ ಕೊಲ್ಯ, ತಿಮ್ಮಪ್ಪ ಪೂಜಾರಿ ಕೊಟ್ಟಾರಿಪಾಲು, ಪಿಗ್ಮಿ ಸಂಗ್ರಾಹಕ ಸುನಿಲ್ ಕುಮಾರ್ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು.
ವಿವಿಧ ಶಾಖಾ ವ್ಯಾಪ್ತಿಯ ಪಿಗ್ಮಿ ಸಂಗ್ರಹಗಾರರಿಗೆ ಗುರುತಿಸಿ ಗೌರವ ಧನ ನೀಡಲಾಯಿತು.

ವೇದಿಕೆಯಲ್ಲಿ ಶ್ರೀ ಗುರು ಕ್ರೆಡಿಟ್ ಸಹಕಾರಿಯ ನಿರ್ದೇಶಕ ರತ್ನಾಕರ ನಾಡಾರ್, ಉದ್ಯಮಿ ಮೋನಪ್ಪ ನಾಡಾರ್, ಶರತ್ ಕುಮಾರ್ ಅಮ್ಟೂರು, ಸುಂದರ ಪೂಜಾರಿ ಚೇಳೂರು, ಮೂರ್ತೆದಾರರ ಮಹಾಮಂಡಲ ಉಪಾಧ್ಯಕ್ಷ ರಾಜೇಶ್ ಸುವರ್ಣ, ನಿರ್ದೇಶಕ ವಿಶ್ವನಾಥ್, ಸಜೀಪ ಮೂನ್ನೂರು ಮೂರ್ತೆದಾರರ ಸೇ. ಸ. ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ನಿರ್ದೇಶಕರಾದ ರಮೇಶ ಅನ್ನಪ್ಪಾಡಿ, ವಿಠಲ ಬೆಳ್ಚಾಡ, ಅಶೋಕ ಪೂಜಾರಿ ಕೋಮಾಲಿ, ಕೆ. ಸುಜಾತ ಎಂ., ವಾಣಿ ವಸಂತ್, ಅರುಣ್ ಕುಮಾರ್ ಎಂ., ಆಶಿಶ್ ಪೂಜಾರಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಮತಾ ಜಿ. ವರದಿ ವಾಚಿಸಿದರು. ನಿರ್ದೇಶಕ ಜಯಶಂಕರ ಕಾನ್ಸಾಲೆ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.