ಬಂಟ್ವಾಳ: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ) ಸಜೀಪಮೂಡ ಬೊಳ್ಳಾಯಿ ಇದರ ಬಿ.ಸಿ.ರೋಡ್ ಶಾಖೆಯಲ್ಲಿ ಜೂ. 25 ರಂದು ಇ ಸ್ಟಾಂಪಿಂಗ್ ಸೌಲಭ್ಯದ ಅನಾವರಣವನ್ನು ಹಿರಿಯ ನ್ಯಾಯವಾದಿ ಅಶ್ವನಿ ಕುಮಾರ್ ರೈ ದೀಪ ಬೆಳಗಿಸಿ ಚಾಲನೆ ನೀಡಿದರು.
ಸಹಕಾರಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಗಣ್ಯರಾದ ಬಿ.ವಿಶ್ವನಾಥ, ರಾಜೇಶ್ ಸುವರ್ಣ, ಪ್ರವೀಣ್ ರೊಡ್ರಿಗಸ್, ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನಪಾಲು, ವಿಠಲ ಬೆಳ್ಚಡ, ಜಯಶಂಕರ ಕಾನ್ಸಾಲೆ, ಅಶೋಕ್ ಕೋಮಾಲಿ, ಅರುಣ್ ಕುಮಾರ್, ಆಶಿಶ್ ಪೂಜಾರಿ, ರಮೇಶ್ ಸುವರ್ಣ, ಗಿರೀಶ್ ಕುಮಾರ್ ಪೆರ್ವ, ನ್ಯಾಯವಾದಿ ಚಿದಾನಂದ, ಸಿಇಒ ಮಮತಾ ಜಿ., ಮೆನೇಜರ್ ಶ್ರುತಿ, ಸಿಬಂದಿಗಳಾದ ಅಕ್ಷಿತಾ, ಸುಚಿತ್ರ ಉಪಸ್ಥಿತರಿದ್ದರು.