ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್( ರಿ) ಬಂಟ್ವಾಳ ಇದರ ತುಂಬೆ ವಲಯದ 2023- 24 ನೇ ಸಾಲಿನ ಸಾಧನ ಸ್ನೇಹಕೂಟ ಕಾರ್ಯಕ್ರಮ ನರಿಕೊಂಬು ಗ್ರಾಮದ ಮಾನಸ್ ನಿಲಯದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ 2023-24 ಸಾಲಿನಲ್ಲಿ ತುಂಬೆ ವಲಯದ ಏಳು ಒಕ್ಕೂಟಗಳಾದ ಫರಂಗಿಪೇಟೆ, ಸುಜೀರ್, ತುಂಬೆ, ಕಳ್ಳಿಗೆ, ನರಿಕೊಂಬು ಎ., ನರಿಕೊಂಬು ಬಿ., ನಂದಾವರ. ಒಕ್ಕೂಟಗಳಲ್ಲಿ ವಿಶೇಷ ಸಾಧನೆ ಮಾಡಿ ಗುರಿ ಸಾಧಿಸಿದ ಸೇವ ಪ್ರತಿನಿಧಿಗಳ ಸಾಧನೆಯನ್ನು ಗುರುತಿಸಿ ಬಹುಮಾನ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಬಂಟ್ವಾಳದ ತಾಲೂಕು ಯೋಜನಾಧಿಕಾರಿಯಾಗಿದ್ದ ಮಾದವ ಗೌಡ ಯೋಜನೆಯ ಜನಜಾಗೃತಿ ವೇದಿಕೆಗೆ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದು ಅವರನ್ನು ಯೋಜನೆಯ ತುಂಬೆ ವಲಯದ ಪರವಾಗಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತಾಡಿದ ಮಾದವ ಗೌಡ ಯಾವುದೇ ಗುರಿ ಸಾಧಿಸಬೇಕಾದರೆ ಹೃದಯ ಸಿರಿವಂತಿಗೆ ಅಗತ್ಯ, ಇದಕ್ಕೆ ತುಂಬೆ ವಲಯವು ಮಾದರಿಯಾಗಿದೆ, ಆ ಕಾರಣಕ್ಕಾಗಿ ತುಂಬೆ ವಲಯವು ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಸಾಧನೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿಗೆ ನೂತನ ಯೋಜನಾಧಿಕಾರಿ ಅಧಿಕಾರ ಸ್ವೀಕರಿಸಿದ ಯೋಜನಾಧಿಕಾರಿ ಬಾಲಕೃಷ್ಣ ಎಂ., ಬಂಟ್ವಾಳ ತಾಲೂಕು ಕೃಷಿ ಮೇಲ್ವಿಚಾರಕ ಜನಾರ್ಧನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚಂದ್ರಮೋಹಿನಿ, ಆಂತರಿಕ ಲೆಕ್ಕ ಪರಿಶೋಧಕ ರಾಜೇಶ್, ಪ್ರಬಂಧಕ ಧರ್ಮ, ಸಹ ಪ್ರಬಂಧಕಿ ದಿವ್ಯ, ತುಂಬೆ ವಲಯಕ್ಕೆ ಸಂಬಂಧಪಟ್ಟ ಎಲ್ಲಾ ಒಕ್ಕೂಟಗಳ ಸೇವ ಪ್ರತಿನಿಧಿಗಳು, ವಿಎಲ್ಇ ಗಳು ಉಪಸ್ಥಿತರಿದ್ದರು.

ತುಂಬೆ ವಲಯ ಮೇಲ್ವಿಚಾರಕಿ ಮಮತ ಸಂತೋಷ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.