ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಇಂದು (ಮಾ.5) ಬಹುಕಾಲದ ಗೆಳತಿ ಸಾನಿಯಾ ಚಾಂದೋಕ್ (Saaniya Chandhok) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ : ಖಲಿಸ್ತಾನಿ ಉಗ್ರರನ್ನು ಟೀಕಿಸುತ್ತಿದ್ದ ಪಂಜಾಬಿ ಯೂಟ್ಯೂಬರ್ ಕೆನಡಾದಲ್ಲಿ ಹತ್ಯೆ
ಕಳೆದ ವರ್ಷ ಆಗಸ್ಟ್ 25ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಇಂದು ಮುಂಬೈನ ಖಾಸಗಿ ಹೊಟೇಲ್‌ನಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿ ವಿವಾಹದಲ್ಲಿ ಭಾರತೀಯ ಕ್ರಿಕೆಟ್ ದಿಗ್ಗಜರ ಸಮ್ಮಿಲ್ಲನವಾಗಿತ್ತು. ಎಲ್ಲರೂ ವಿವಾಹದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದರು. ಜೊತೆಗೆ ಸಿನಿಮಾ ತಾರೆಯರು, ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ಆಗಮನಿಸಿದ್ದರು.
ಮದುವೆಗೆ ಎಂಎಸ್ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ, ಗೌತಮ್ ಗಂಭೀರ್ ಹಾಗೂ ಅವರ ಪತ್ನಿ ನತಾಶಾ ಜೈನ್, ಯುವರಾಜ್ ಸಿಂಗ್ ಅವರ ಪತ್ನಿ ಹೇಜಲ್, ಸುನೀಲ್ ಗವಾಸ್ಕರ್ ಸೇರಿ ಹಲವರು ಭಾಗಿಯಾಗಿದ್ದರು.
