ಬಂಟ್ವಾಳ: ನರಿಂಗಾನ ಪರಿಸರದಲ್ಲಿ ನಡೆಯುತ್ತಿ ಕೋಮು ಗಲಭೆಗಳನ್ನು ಪ್ರಾರಂಭದಲ್ಲಿಯೇ ಚಿವುಟಿ ಹಾಕಿ ಸೌಹಾರ್ದತೆ ಬೆಳೆಸಲು ಕಾರಣೀಕರರ್ತರಾದವರು ಎಸ್.ಮಹಬಲೇಶ್ವರ ಭಟ್ ಎಂದು ಮಂಗಳೂರಿನ ತಜ್ಞ ವೈದ್ಯ ಹಾಗೂ ಚಿಂತಕ ಡಾ| ಶ್ರೀನಿವಾಸ ಕಕ್ಕಿಲ್ಲಾಯ ಆಭಿಪ್ರಾಯಪಟ್ಟರು.
ಅವರು ನ.೨೭ರಂದು ಬಂಟ್ವಾಳ ಎ.ಶಾಂತರಾಮ ಪೈ ಸ್ಮರಕ ಭವನದಲ್ಲಿ ನಡೆದ ಕಮ್ಯೂನಿಸ್ಟ್ ನಾಯಕ ಎಸ್.ಮಹಬಲೇಶ್ವರ ಭಟ್ ಅವರ ನೂರರ ನೆನಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸಂದರ್ಭ ಮಹಾಬಲೇಶ್ವರ ಭಟ್ ನಿರ್ದೇಶಕರಾಗಿದ್ದರು, ನಮಗೆ ವಯಸ್ಸಿನ ತೀರಾ ವ್ಯತ್ಯಾಸವಿದ್ದರೂ ಹಿರಿಯ ಕಿರಿಯ ಎಂಬ ಭೇದ ಭಾವ ಇಲ್ಲದೇ ಅಪಾರ ಗೌರವ ನೀಡುತ್ತಿದ್ದರು, ಇದು ಅವರ ಕಮ್ಯೂನಿಸ್ಟ್÷ ಚಿಂತನೆ ಎಂದರು.
ಅಮ್ಟಾಡಿ ಗ್ರಾ . ಪಂ.ಸದಸ್ಯ, ಸಿಪಿಐ ನಾಯಕ ಬಿ.ಬಾಬು ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷೆ ಮಮತಾ ಗಟ್ಟಿ, ಸಾಮಾಜಿಕ ಕಾರ್ಯಕರ್ತ ಎನ್.ಪದ್ಮನಾಭ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಎಐಟಿಯುಸಿ ನಾಯಕ ವಿ.ಕುಕ್ಯಾನ್, ಡಾ| ಉದಯ ಶಂಕರ್, ಡಾ| ಮಾಧವಿ, ನರಿಂಗಾನ ಶಾಲಾ ಮುಖ್ಯ ಶಿಕ್ಷಕ ಗಣೇಶ್ ಉಪಸ್ಥಿತರಿದ್ದರು.
ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಪ್ರೇಮನಾಥ ಕೆ. ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.


