ಮಂಗಳೂರು ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಮಾ8ರಂದು ನಡೆದ ಸಭೆಯಲ್ಲಿ ನೆಲ್ಲಿದಡಿ ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನ ವನ್ನು ಉಳಿಸಿ ದೈವಗಳ ಸ್ಥಳ ವನ್ನು ಎಂ ಎಸ್ ಇ ಝೆಡ್ ವ್ಯಾಪ್ತಿಯಿಂದ ಹೊರಗಿಡಲು ಮತ್ತು ಅದಕ್ಕೆ ರಸ್ತೆಯ ಸಂಪರ್ಕವನ್ನು ಕಲ್ಪಿಸಲು ಸಂಸದರಾದ ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ್ ಕೋಟ್ಯಾನ್, ಹಾಗೂ ಮಂಗಳೂರಿನ ಜಿಲ್ಲಾಧಿಕಾರಿಗಳು ಎಂ ಎಸ್ ಇ ಝೆಡ್ ನ ಅಧಿಕಾರಿಗಳಿಗೆ ಸೂಚಿಸಿದ್ದು ಇಂದು ಎಂ. ಎಸ್. ಇ. ಝೆಡ್ ನ ಅಧಿಕಾರಿಗಳು ಮತ್ತು ಕೆ.ಐ.ಡಿ.ಬಿಯ ಅಧಿಕಾರಿಗಳು ನೆಲ್ಲಿದಡಿ ಗುತ್ತುವಿಗೆ ಆಗಮಿಸಿ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು ಹಾಗೂ ದೈವಸ್ಥಾನದ ಜಾಗ ಮತ್ತು ನೆಲ್ಲಿದಡಿಯ ಹಳೆಯ ಸಂಪರ್ಕ ರಸ್ತೆಯನ್ನು ವೀಕ್ಷಿಸಿದರು.
ಹಾಗೂ ಶೀಘ್ರದಲ್ಲಿ ಸಮಸ್ಯೆ ಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.