ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ನಮ್ಮ ಬಿಜೆಪಿ ಸರ್ಕಾರ ಕುಂಭಮೇಳದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಘಟಿಸಿದ ಕಾಲ್ತುಳಿತದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ 25 ಲಕ್ಷ ರೂ. ಪರಿಹಾರ ವಿತರಿಸುವ ಮೂಲಕ ತನ್ನ ಮಾನವೀಯ ಬದ್ಧತೆಯನ್ನು ಮೆರೆದಿದೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಶ್ರೀ  ಯೋಗಿ ಆದಿತ್ಯನಾಥ್‌ ಅವರು ತನ್ನ ರಾಜ್ಯ ಅಥವಾ ಹೊರಗಿನ ರಾಜ್ಯದ ಯವರು ಎನ್ನುವುದನ್ನು ಲೆಕ್ಕಿಸದೇ ಕುಂಭಮೇಳದಲ್ಲಿ ಭಾಗವಹಿಸಿದವರೆಲ್ಲರೂ ಈ ದೇಶದ ಸತ್ಪ್ರಜೆಗಳು ಎಂದು ಪರಿಗಣಿಸಿ ತನ್ನ ಪರಿಹಾರವನ್ನು ಘೋಷಿಸಲಾಗಿದೆ.