ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ರೋಬೋಟಿಕ್ ಕೋಡಿಂಗ್ ತರಗತಿ ಉದ್ಘಾಟನಾ ಕರ‍್ಯಕ್ರಮ ಜೂ.14 ರಂದು  ನಡೆಯಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷರು ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡುತ್ತಾ “ಒಳ್ಳೆಯದರಿಂದ ಒಳ್ಳೆಯ ಕಡೆಗೆ ಎನ್ನುವಂತೆ ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ಹಳೆ ಬೇರಿನ ಆಧಾರದಿಂದ ಹೊಸ ಚಿಗುರಿನೆಡೆಗೆ ಎಂಬಂತೆ ನಮ್ಮ  ಸಂಸ್ಕೃತಿಯನ್ನು ಇಟ್ಟುಕೊಂಡು ಇಂದಿನ ಸವಾಲುಗಳನ್ನು ಎದುರಿಸಿ ವೈಜ್ಞಾನಿಕವಾಗಿ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ರೋಬೋಟಿಕ್ ತಯಾರಿಕ ತರಬೇತಿಯನ್ನು ವಿದ್ಯರ್ಥಿ ಗಳಿಗೆ ನೀಡಲಾಗುತ್ತಿದೆ. ಈ ವಿದ್ಯಾಸಂಸ್ಥೆಯಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ವಿದ್ಯರ್ಥಿ ಗಳಿರುವುದರಿಂದ ಈ ರೋಬೋಟಿಕ್ ತಂತ್ರಜ್ಞಾನದ ತರಬೇತಿ ದೊರಕಬೇಕು, ವಿಜ್ಞಾನದಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನ ಮಾಡಬೇಕು. ಎನ್ನುವ ಉದ್ದೇಶದಿಂದ ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ಡ್ರೀಮ್ ಕಿಟ್ ವತಿಯಿಂದ ಈ ತರಬೇತಿಯನ್ನು ನೀಡಲಾಗುತ್ತದೆ.ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ” ಎಂದು ತಮ್ಮ ಉದ್ಘಾಟನಾ ಮಾತುಗಳಲ್ಲಿ ಹೇಳಿದರು.  ಇದನ್ನೂ ಓದಿ : ಗೋಲ್ಡ್‌ ಪ್ರಿಯರಿಗೆ ಶಾಕ್‌ – 1 ವಾರದಲ್ಲಿ ಚಿನ್ನದ ದರ 3,645 ರೂ. ಏರಿಕೆ

ಶಾಲಾ ಸಂಸ್ಥಾಪಕರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಮಾನವ ನಿರ್ಮಿತ  ರೋಬೋಟ್ ಗೆ ಚಾಲನೆ ನೀಡುವುದರ ಮೂಲಕ, ರೋಬೋಟಿಕ್ ಕೋಡಿಂಗ್ ತರಬೇತಿ ತರಗತಿಯ ಉದ್ಘಾಟನಾ ಕರ‍್ಯಕ್ರಮವು ನಡೆಯಿತು.

ವೇದಿಕೆಯಲ್ಲಿ ಡ್ರೀಮ್ ಕಿಟ್ ಕೋ ಫೌಂಡರ್ ಮತ್ತು ಪ್ರೊಡಕ್ಟ್ ಡಿಸೈನರ್ ಆರ‍್ಷ್ ಶೆಟ್ಟಿ, ಟ್ರೈನಿಂಗ್ ಮ್ಯಾನೇಜರ್ ಶ್ರವಣ್ ಯು., ಟ್ರೈನರ್ ಶ್ರೇಯಸ್, ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಕ್ಷಯ್, ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಸತ್ಯರಾಜ್ ಕರ‍್ಯನರ‍್ವಹಣಾಧಿಕಾರಿ ಸಚಿತ್, ಮಾಧ್ಯಮ ಮಿತ್ರರು ಪವನ್ ರೈ, ಮಾತೃ ಸ್ವರೂಪಿ ಡಾ|ಕಮಲ ಪ್ರಭಾಕರ ಭಟ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

ಕರ‍್ಯಕ್ರಮವನ್ನು ವಿದ್ಯರ‍್ಥಿಗಳಾದ ತನ್ಮಯಿ ರೈ ನಿರೂಪಿಸಿ,ಪ್ರಾಪ್ತಿ ಸ್ವಾಗತಿಸಿ ಸಾನ್ವಿ ವಂದಿಸಿದರು.  ಇದನ್ನೂ ಓದಿ : ಇಸ್ರೇಲ್ ಪ್ರಧಾನಮಂತ್ರಿಯಿಂದ ದೂರವಾಣಿ ಕರೆ ಸ್ವೀಕರಿಸಿದ ಪ್ರಧಾನಮಂತ್ರಿ