ಹಾಸನ: ಈ ಥರ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು.. ಇದೇ ಜಾಗದಲ್ಲಿ ನನ್ನ ಮಗನನ್ನ ಮಲಗಿಸಿದ್ದೇನೆ… ನನ್ನ ಮಗನಿಗೋಸ್ಕರವೇ ಈ ಜಾಗ ಮಾಡಿದ್ದು, ಈಗ ಇಲ್ಲೇ ಮಲಗಿಸಿದ್ದೀನಿ.. ಯಾರಿಗೂ ಈ ಪರಿಸ್ಥಿತಿ ಬೇಡ… ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಆರ್‌ಸಿಬಿ ಅಭಿಮಾನಿ ಭೂಮಿಕ್ ತಂದೆಯ ಆಕ್ರಂದನ ನುಡಿಗಳಿವು.
ಹೌದು. ಘಟನೆ ನಡೆದು ಮೂರು ದಿನ ಕಳೆದಿದೆ. ಆದ್ರೆ ಹೆತ್ತವರ ಆಕ್ರಂತಕ ಕಿಂಚಿತ್ತೂ ಕಡಿಮೆಯಾಗಿಲ್ಲ. ಮಕ್ಕಳನ್ನು ನೆನೆದು ಗೋಳಿಡುತ್ತಲೇ ಇದ್ದಾರೆ. ಅದೇ ರೀತಿ ಮೃತ ಎಂಜಿನಿಯರಿಂಗ್ ವಿದ್ಯಾರ್ಥಿ ಭೂಮಿಕ್ ತಂದೆ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದ ಡಿ.ಟಿ ಲಕ್ಷ್ಮಣ್ ಮಗನ ಸಮಾಧಿ ಮೇಲೆ ಮಲಗಿ ಗೋಳಾಡಿದ್ದಾರೆ. ಇದನ್ನೂ ಓದಿ :ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ
ಈ ಥರ ಪರಿಸ್ಥಿತಿ ಬೇರೆ ಯಾವ ತಂದೆ ತಾಯಿಗೂ ಬರಬಾರದು… ನನ್ನ ಮಗನನ್ನ ಇಲ್ಲೇ ಮಲಗಿಸಿದ್ದೀನಿ… ನನ್ನ ಮಗನ ಜೊತೆ ಮಲಗ್ತೀನಿ… ನನ್ನ ಮಗನ ಜೊತೆ ಮಲಗ್ತೀನಿ… ನನ್ನ ಮಗ ಇನ್ನೂ ಮಲಗಿದ್ದಾನೆ… ಯರ‍್ಯಾರ್ ಬ್ಯಾಡ್ ಕಾಮೆಂಟ್ ಮಾಡೀರಾ ಅರ್ಥ ಮಾಡ್ಕೊಳ್ಳಿ ಅವರ ತಂದೆ ಪರಿಸ್ಥಿತಿ ಅಂತ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯ ಕಠುಕರಿಗೂ ಕಣ್ಣೀರು ತರಿಸುವಂತಿದೆ.
ಭೂಮಿಕ್ ಡಿ.ಟಿ.ಲಕ್ಷ್ಮಣ-ಅಶ್ವಿನಿ ದಂಪತಿಯ ಏಕೈಕ ಪುತ್ರ. ಕಳೆದ ಇಪ್ಪತ್ತು ವರ್ಷಗಳಿಂದ ಡಿ.ಟಿ.ಲಕ್ಷ್ಮಣ ಕುಟುಂಬಸ್ಥರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಡಿ.ಟಿ.ಲಕ್ಷ್ಮಣ ಬೆಂಗಳೂರಿನಲ್ಲಿ ಸಣ್ಣ ಕೈಗಾರಿಕೆ ನಡೆಸುತ್ತಿದ್ದಾರೆ. ಭೂಮಿಕ್ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದು ಬುಧವಾರ ಕೂಡ ಕಾಲೇಜಿಗೆ ತೆರಳಿದ್ದರು. ನಂತರ ಸ್ನೇಹಿತರ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದು, ಕಾಲ್ತುಳಿತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾನೆ.