ಸ್ಟಾರ್‌ ಜೋಡಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್‌ ದೇವರಕೊಂಡ (Vijay Deverakonda) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸುಂದರ ಕ್ಷಣಗಳ ಫೋಟೊಗಳನ್ನು ರಶ್ಮಿಕಾ ಮಂದಣ್ಣ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ಯೂಟ್‌ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಹೆಸರಾಂತ ನಟ ವಿಜಯ್ ದೇವರಕೊಂಡ ವಿವಾಹವು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದಿದೆ. ಬೆಳಗ್ಗೆ 8 ಗಂಟೆಗೆ ನಡೆದ ಶುಭ ಮುಹೂರ್ತದಲ್ಲಿ ವಿರೋಶ್ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ಕುಟುಂಬಸ್ಥರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ದಶಕದ ಪ್ರೇಮಕಥೆಯನ್ನು ಅಧಿಕೃತಗೊಳಿಸಿದ್ದಾರೆ. ವಿವಾಹಿತೆಯಾಗಿ ರಶ್ಮಿಕಾ ಅವರ ಮೊದಲ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗಿದೆ.

ಮದುವೆ ಬಳಿಕ ರಶ್ಮಿಕಾ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ವಿಜಯ್ ಅವರನ್ನು ತಮ್ಮ ಪತಿ ಎಂದು ಪ್ರೀತಿಯಿಂದ ಪರಿಚಯಿಸಿದ್ದಾರೆ. ‘ನಿಜವಾದ ಪ್ರೀತಿ ಹೇಗಿರುತ್ತದೆ ಎಂದು ನನಗೆ ಕಲಿಸಿದ ವ್ಯಕ್ತಿ, ಶಾಂತಿಯಿಂದ ಇರುವುದು ಹೇಗಿರುತ್ತದೆ ಎಂದು ನನಗೆ ತೋರಿಸಿದ ವ್ಯಕ್ತಿ!… ನಾನು ಯಾವಾಗಲೂ ಕನಸು ಕಂಡ ಹೆಣ್ಣು. ಏಕೆಂದರೆ, ನೀವು ನಾನು ನಾನಗಿರುವಂತೆ ಮಾಡಿದ್ದೀರಿ! ನನಗೆ ಆಶೀರ್ವಾದ ಸಿಕ್ಕಿದೆ. ನಾನು ನಿಮ್ಮ ಹೆಂಡತಿಯಾಗಿರುವುದು ಖುಷಿ ಕೊಟ್ಟಿದೆ. ಒಟ್ಟಿಗೆ ಸುಖಕರ ಜೀವನ ಹೊಂದೋಣ! ನಾನು ನಿನ್ನನ್ನು ಪ್ರೀತಿಸುತ್ತೇನೆ!’ ಎಂದು ಬರೆದುಕೊಂಡಿದ್ದಾರೆ.

ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಅವರಿಗಾಗಿ ಪ್ರೀತಿಯ ಸಂದೇಶ ಹಂಚಿಕೊಂಡಿದ್ದಾರೆ. ‘ಆಕೆ ಹತ್ತಿರದಲ್ಲಿದ್ದರೆ ನನ್ನ ದಿನ ಚೆನ್ನಾಗಿರುತ್ತಿತ್ತು ಎಂಬ ಭಾವನೆ ಮೂಡಿಸುವ ರೀತಿಯಲ್ಲಿ ಅವಳನ್ನು ಮಿಸ್ ಮಾಡಿಕೊಂಡೆ… ನನಗೆ ಅವಳ ಸಾಂಗತ್ಯ ಅಗತ್ಯವಿತ್ತು. ನಾನು ಎಲ್ಲೇ ಇದ್ದರೂ ಮನೆಯಲ್ಲಿರುವ ಭಾವನೆ ಮತ್ತು ಶಾಂತತೆಯನ್ನು ಆಕೆಯಿಂದ ಅನುಭವಿಸಿದ್ದೇನೆ. ಹಾಗಾಗಿ, ನಾನು ನನ್ನ ಆತ್ಮೀಯ ಸ್ನೇಹಿತೆಯನ್ನು ಮದುವೆ ಮಾಡಿಕೊಂಡೆ.