ತೆಲುಗು ಸೂಪರ್ ಸ್ಟಾರ್ ರಾಮ್‌ಚರಣ್ ದಂಪತಿ ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಮೆಗಾಸ್ಟಾರ್ ಕುಟುಂಬದಲ್ಲಿ ಭಾರೀ ಸಂಭ್ರಮ ಮನೆಮಾಡಿದೆ.
ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ದರೂ ರಾಮ್‌ಚರಣ್ ಉಪಾಸನಾ ದಂಪತಿ ಮಗು ಮಾಡಿಕೊಂಡಿರಲಿಲ್ಲ. ಎರಡು ವರ್ಷದ ಹಿಂದೆ ಪುತ್ರಿ ಜನಿಸಿದ್ದಳು. ಇದೀಗ ಅವಳಿ ಮಕ್ಕಳು ಜನಿಸಿದ್ದು, ಒಂದು ಹೆಣ್ಣು ಹಾಗೂ ಇನ್ನೊಂದು ಗಂಡು ಮಗುವಾಗಿದೆ. ಇದನ್ನೂ ಓದಿ : ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳ, ಇಲ್ಲಿ ನಡೆದ 77ನೇ ಸಂಭ್ರಮದ ಗಣರಾಜ್ಯೋತ್ಸವ

ಅವಳಿ ಮಕ್ಕಳು ಜನಿಸಿರುವ ವಿಚಾರವನ್ನ ಚಿರಂಜೀವಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಕೋನಿಡೇಲ ಕುಟುಂಬ ತುಂಬಾ ಸಂತೋಷದಲ್ಲಿದೆ. ಜ.31ರಂದು ಹೆರಿಗೆಯಾಗಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ, ಹರಕೆ, ಹಾರೈಕೆಗೆ ಧನ್ಯವಾದಗಳು ಎಂದಜ ತಿಳಿಸಿದ್ದಾರೆ.
