ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಮ್ಮ ವಿದ್ಯುತ್‌ ಜಾಲದ ಬೆನ್ನೆಲುಬುಗಳು, ನಮ್ಮ ಮನೆಗಳಲ್ಲಿ ಬೆಳಕು ಹರಿಸಲು ರಾತ್ರಿ-ಹಗಲು, ಮಳೆ-ಗಾಳಿ ಎನ್ನದೆ ಅವಿರತ ಶ್ರಮಿಸುತ್ತಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಮಂಡಳಿ ಕಲ್ಲಡ್ಕ ವಲಯದ ಪವರ್‌ಮ್ಯಾನ್‌ಗಳೊಂದಿಗೆ ರಕ್ಷಾಬಂಧನ ಆಚರಿಸಲಾಯಿತು.

ಪವರ್‌ಮ್ಯಾನ್‌ಗಳೊಂದಿಗೆ ರಕ್ಷಾಬಂಧನ ಆಚರಣೆ

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್‌ ಕಲ್ಲಡ್ಕ ಮಾತನಾಡಿ, “ರಕ್ಷಾಬಂಧನ ಎಂದರೆ ನೂರಾರು ನೂಲುಗಳನ್ನು ಒಂದು ದಾರದೊಂದಿಗೆ ಜೋಡಿಸಿದಂತೆ ನಾವು ಪರಸ್ಪರ ಒಟ್ಟಾಗಿರಬೇಕು, ಒಂದಾಗಿರಬೇಕು, ಎನ್ನುವ ಭಾವನೆ ಮೂಡಿಸುವ ವಿಶೇಷ ಹಬ್ಬ. ನಾನು ನಿನ್ನನ್ನುರಕ್ಷಣೆ ಮಾಡುತ್ತೇನೆ ನೀನು ನನ್ನರಕ್ಷಣೆ ಮಾಡಬೇಕು ಎಂಬ ಭಾವನೆಯಲ್ಲಿ ಒಟ್ಟಾದಾಗಅದರಲ್ಲಿಅದ್ಭುತ ಶಕ್ತಿ ಇದೆ.
ದೇವರು ಹುಟ್ಟಿ, ನಡೆದಾಡಿದದೇಶ ನಮ್ಮ ಭಾರತ. ಎಲ್ಲರಿಗೂ ಒಳ್ಳೆಯದಾಗಬೇಕು, ಒಳಿತಾಗಬೇಕು ಬಯಸುವವರು ನಾವು.ನಮ್ಮಜಾತಿ, ಮತ, ಭಾಷೆ ಬೇರೆ-ಬೇರೆಯಾದರು ನಾವೆಲ್ಲರೂಒಂದು- ನಾವೆಲ್ಲರೂ ಬಂಧುಯಾಕೆಂದರೆ ನಾವೆಲ್ಲರೂ ಹಿಂದೂ.ಸಹೋದರ ಸಹೋದರಿಯ ಭಾತೃತ್ವವನ್ನುತೋರಿಸುವ ಈ ಆಚರಣೆಯುಎಲ್ಲಾ ಹಬ್ಬಗಳಿಗಿಂತಲೂ ವಿಶೇಷವಾದುದು. ಕೇವಲ ತಂಗಿಅಣ್ಣನಿಗೆ ಮಾತ್ರವಲ್ಲದೆ ಸಹೋದರ ಸಮನಾಗಿರುವ ಎಲ್ಲರಿಗೂ ರಕ್ಷಾಧಾರಣೆ ಮಾಡಲಾಗುತ್ತದೆ. ಪರಸ್ಪರಒಬ್ಬರಿಗೊಬ್ಬರರಕ್ಷಣೆ ಮಾಡುತ್ತೇವೆಎನ್ನುವ ಭಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬಇದಾಗಿದೆ.”ಎಂದು ರಕ್ಷಾ ಬಂಧನದ ಆಚರಣೆಯ ಹಿಂದಿರುವ ಪುರಾಣ ಕಥೆಗಳನ್ನು ಉಲ್ಲೇಖಿಸುತ್ತಾ ಹೇಳಿದರು.
ಕಾರ್ಯಕ್ರಮದಲ್ಲಿಪವರ್‌ಮ್ಯಾನ್‌ಗಳಿಗೆ ಸಂಸ್ಥೆಯ ಸಂಸ್ಥಾಪಕರಾದಡಾ| ಪ್ರಭಾಕರ್ ಭಟ್‌ಕಲ್ಲಡ್ಕ ಶಾಲು ಹೊದಿಸಿ ಭಾರತಮಾತೆಯ ಸ್ಮರಣಿಕೆ ನೀಡಿಗೌರವಿಸಿದರು ಹಾಗೂ ಅಧ್ಯಾಪಕವೃಂದದವರುಆರತಿ ಬೆಳಗಿ,ತಿಲಕಧಾರಣೆ ಮಾಡಿದರು.ನಂತರ ವಿದ್ಯಾರ್ಥಿಗಳು ವೇದಿಕೆಯಲ್ಲಿದ್ದಅತಿಥಿಗಣ್ಯರಿಗೆರಕ್ಷಾಧಾರಣೆ ಮಾಡಿದರು.ಕಾರ್ಯಕ್ರಮದಲ್ಲಿವಿದ್ಯಾರ್ಥಿನಿಯರುಸಮೂಹಗೀತೆ ಹಾಡಿದರು.ನಂತರ ವಿದ್ಯಾರ್ಥಿಗಳಿಂದ ಪರಸ್ಪರರಕ್ಷಾಧಾರಣೆ ನಡೆಯಿತು.
ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಮಂಡಳಿ ಕಲ್ಲಡ್ಕ ವಲಯದ ಶಾಖಾಧಿಕಾರಿಯಾದ ಮಹಾಬಲ ಬಿ ಮಾತನಾಡಿ, “ ಕಾಲಮಿತಿಯಿಲ್ಲದ ಕೆಲಸದ ಒತ್ತಡದ ಅವಧಿಯಲ್ಲು ಈ ಕಾರ್ಯಕ್ರಮ ನಮಗೆ ಖುಷಿ ಕೊಟ್ಟಿದೆ. ರಕ್ಷಾಬಂಧನದ ಚರಿತ್ರೆ ಮಹಾಭಾರತದಲ್ಲೂ ಇದೆ, ರಕ್ಷಾಬಂಧನ ದ್ವೇಷ ಇಲ್ಲದೆ ಎಲ್ಲರೂ ಒಟ್ಟಾಗಿ ಬದುಕಬೇಕು ಎಂಬುದನ್ನು ತಿಳಿಸುತ್ತದೆ. ಇಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುವಂತೆ ಇಲ್ಲಿನ ಶಿಸ್ತು ನಿಮ್ಮನ್ನುಎತ್ತರಕ್ಕೆಕೊಂಡೊಯ್ಯುವಲ್ಲಿ ಸಹಕಾರಿಯಾಗುತ್ತದೆ.ಅಂತೆಯೇ ವಿದ್ಯುಚ್ಛಕ್ತಿಗೆ ಸಂಬಂಧಪಟ್ಟಂತೆ ಸದಾ ಸಹಕಾರ ನೀಡುತ್ತೇವೆ.”ಎಂಬ ಭರವಸೆಯ ಮಾತುಗಳನ್ನಾಡಿದರು.
ತದನಂತರ ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಮಂಡಳಿ ಕಲ್ಲಡ್ಕ ವಲಯದ ಶಾಖಾಧಿಕಾರಿಯಾದ ಮಹಾಬಲ ಬಿ ಇವರುವಿದ್ಯುತ್ ಸುರಕ್ಷತೆಯ ಬಗ್ಗೆ, ವಿದ್ಯುತ್ ಅವಘಡಗಳಿಂದ ತಪ್ಪಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.
ವೇದಿಕೆಯಲ್ಲಿಬಂಟ್ವಾಳ ವಿದ್ಯುತ್‌ಗುತ್ತಿಗೆದಾರ ದಿವಾಕರಚೆಂಡೆ, ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಮಂಡಳಿ ಕಲ್ಲಡ್ಕ ವಲಯಮೆಕ್ಯಾನಿಕ-೨ ರಾಜೇಂದ್ರ,ಪವರ್‌ಮೆನ್‌ಗಳಾದ ಲವ, ವಸಂತ, ಹರೀಶ, ಶಿವಶರಣ, ಸಂಜಯ, ಮಧುಸೂದನ, ಶ್ರೀನಿವಾಸ, ಶ್ರೀರಾಮ ವಿದ್ಯಾಕೆಂದ್ರದಸAಚಾಲಕವಸAತ ಮಾಧವಹಾಗೂ ಮುಖ್ಯೋಪಾಧ್ಯಾಯ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪ್ರಾಪ್ತಿ ಸ್ವಾಗತಿಸಿ, ಚಾರಿತ್ರö್ಯಆರ್ ಡಿ ವಂದಿಸಿ,ಬಿ.ರವಿಕಾಂತ್‌ನಿರೂಪಿಸಿದರು.