ಬಂಟ್ವಾಳ : ಕ. ಜಿಲ್ಲಾ ಪಂಚಾಯತ್, ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ, ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ಜು. 27 ರಂದು ಡೆಂಗ್ಯೂ ಹಾಗೂ ಕೀಟಜನ್ಯ ರೋಗಗಳ ಬಗ್ಗೆ ಜನಜಾಗೃತಿ ಅಭಿಯಾನ ನಡೆಯಿತು. ಇದನ್ನೂ ಓದಿ : ಕಾವೇರಿ ನದಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಸಿ.ಎಂ. -ಸಿದ್ಧರಾಮಯ್ಯ
ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಹರಿಪ್ರಸಾದ್ ಸ್ವಾಗತಿಸಿದರು. ಬಂಟ್ವಾಳ ನಗರ ವೈದ್ಯಾಧಿಕಾರಿಗಳಾದ ಡಾ. ಅಶ್ವಿನಿ ಅವರು ಡೆಂಗ್ಯೂ ಹಾಗೂ ಕೀಟಜನ್ಯ ರೋಗಗಳ ಹರಡುವಿಕೆ, ನಿಯಂತ್ರಣ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಇದನ್ನೂ ಓದಿ : ಕಾವೇರಿ ನದಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಸಿ.ಎಂ. -ಸಿದ್ಧರಾಮಯ್ಯ
ಶ್ರೀಯುತ ರಾಕೇಶ್ ನಿರೀಕ್ಷಣಾಧಿಕಾರಿ, ಶ್ರೀಮತಿ ಸಂಧಿಕಾ ಸುರಕ್ಷಣಾಧಿಕಾರಿ ಮತ್ತು ಶ್ರೀಮತಿ ಮಂಜುಳಾ, ಆಶಾ ಕಾರ್ಯಕರ್ತೆ, ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಪಿ ಅಭಿಯಾನದಲ್ಲಿ ಭಾಗವಹಿಸಿದರು.