ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಸಂವಿಧಾನವನ್ನು ಬದಲಾಯಿಸುತ್ತವೆ ಎಂದು ಹೇಳಿಕೆ ನೀಡಿರುವ ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ವಿರುದ್ಧ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಬಳಿ ಇರುವ ಸಂವಿಧಾನ. ಶಿಲ್ಪಿ.ಡಾ| ಬಿ.ಆರ್. ಅಂಬೇಡ್ಕರ್  ಪ್ರತಿಮೆಯ ಬಳಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ಇವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರುಗಳಾದ ವೇದವ್ಯಾಸ ಕಾಮತ್, ಡಾಕ್ಟರ್ ಭರತ್ ಶೆಟ್ಟಿ , ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಭಾಗಿರಥೀ ಮುರಳ್ಯ, ಕಿಶೋರ್ ಕುಮಾರ್ ಭೊಟ್ಯಾಡಿ, ಮಾಜಿ ಶಾಸಕರುಗಳಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ ಜಿಲ್ಲಾ ಪದಾಧಿಕಾರಿಗಳಾದ ರವೀಂದ್ರ ಶೆಟ್ಟಿ ಉಳಿದೊಟ್ಟು ,ಪೂಜಾ ಪೈ, ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ಯತೀಶ್ ಆರ್ವರ್, ಜಿಲ್ಲಾ ಕಾರ್ಯದರ್ಶಿಗಳಾದ ದಿನೇಶ್ ಅಮ್ಟೂರು, ಸೀತಾರಾಮ ಬೆಳಾಲು ,ಶ್ರೀಮತಿ ಪೂರ್ಣಿಮಾ, ಶ್ರೀಮತಿ ವಸಂತಿ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ದಿವಾಕರ ಪಾಂಡೇಶ್ವರ, ಸುಧೀರ್ ಶೆಟ್ಟಿ ಕಣ್ಣೂರು, ಜಯಾನಂದ ಅಂಚನ್ ಮಂಡಲದ ಅಧ್ಯಕರಾದ ರಮೇಶ ಕಂಡೆಟ್ಟು, ರಾಜೇಶ್ ಕೊಟ್ಟಾರಿ ಜಗದೀಶ ಆಳ್ವ ಜಿಲ್ಲಾ ಮೋರ್ಚಾದ ಅಧ್ಯಕ್ಷರುಗಳಾದ ನಂದನ್ ಮಲ್ಯ, ಡಾ.ಮಂಜುಳಾರಾವ್, ಗಣೇಶ್ ಗೌಡ ,ಜಗನ್ನಾಥ್ ಬೆಳವಾಯಿ ,ಮಹಾನಗರ ಪಾಲಿಕೆಯ ಸದಸ್ಯರು ಜಿಲ್ಲೆಯ ಪ್ರಮುಖರು ಕಾರ್ಯಕರ್ತ ಬಂಧುಗಳು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.