ಕರ್ನಾಟಕದ ಆತ್ಮ ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸೌಧದ ಒಳಗೆ ದೇಶದ್ರೋಹದ ಕೆಲಸವಾಗಿರುವ ಪಾಕಿಸ್ತಾನಕ್ಕೆ ಜೈಕಾರ ಕೂಗಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇದು ಸಿದ್ದರಾಮಯ್ಯ ಅವರ ಎಂಟು ತಿಂಗಳ ಸಾಧನೆಯಾಗಿದೆ ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪ ಮಾಡಿದರು.
ಅವರು ಮಾ.2 ರಂದು ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಂಬೇಡ್ಕರ್ ಹೆಸರಿನಲ್ಲಿ ಕಾಂಗ್ರೆಸ್ ಇಂದು ಕೆಟ್ಟ ಕೆಲಸಕ್ಕೆ ಇಳಿದಿರುವುದು ದುರಂತ ಎಂದು ಹೇಳಿದರು. ಸುಳ್ಳಿನ ಸರಮಾಲೆಯನ್ನು ಸೃಷ್ಟಿ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರಕಾರ, ಪಾಕಿಸ್ತಾನದ ಪರವಾದ ಘೋಷಣೆಯನ್ನು ಇಲ್ಲ ಎಂದು ಹೇಳಲು ಹೊರಟಿದೆ ಎಂದು ಆರೋಪ ಮಾಡಿದರು.
ರಾಜ್ಯದಲ್ಲಿ ಬಾಂಬ್ ಬಿದ್ದರು ಅವರನ್ನು ಬಂಧಿಸುವ ಕೆಲಸ ಮಾಡಿಲ್ಲ ಯಾಕೆ ಅಂದರೆ ಕಾಂಗ್ರೆಸ್ ಪಕ್ಷದ ಮತದಾರರ ಬುಟ್ಟಿಯೇ ಬಾಂಬ್ ಹಾಕುವರ ಸಂಸ್ಕೃತಿ ಎಂದು ಆರೋಪ ಮಾಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ದೇಶದ್ರೋಹಿಗಳಿಗೆ ಶಿಕ್ಷೆ ನೀಡದ ಫಲವಾಗಿ ಮುಂದುವರಿದ ಭಾಗವಾಗಿ ಬಾಂಬ್ ಸ್ಫೋಟಕ್ಕೆ ಮುಂದಾಗಿರುವ ಘಟನೆ ನಡೆದಿದೆ. ರಾಜ್ಯ ಸರಕಾರ ಇದೇ ರೀತಿ ಭಯೋತ್ಪಾದಕರಿಗೆ ಸಹಕಾರ ನೀಡುತ್ತಾ ಬಂದರೆ ಮುಂದೊಂದು ದಿನ ಬಂಟ್ವಾಳ ದಲ್ಲಿಯೂ ಬಾಂಬ್ ಬ್ಲಾಸ್ಟ್ ಮಾಡ ಬಹುದು ಬಂದು ಆತಂಕ ವ್ಯಕ್ತಪಡಿಸಿದರು.
ಉಗ್ರವಾದಿಗಳ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸಂಪರ್ಕವಿರುವುದಕ್ಕೆ ಇತ್ತೀಚಿಗೆ ರಾಜ್ಯದಲ್ಲಿ ನಡೆಯುತ್ತಿರುವ ಅನೇಕ ಘಟನೆಗಳು ಸಾಕ್ಷಿಯಾಗಿವೆ ಎಂದು ಕಿಯೋನಿಕ್ಸ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆರೋಪ ಮಾಡಿದರು.
ಎರಡು ದಿನಗಳ ಹಿಂದೆ ವಿಧಾನ ಸೌಧದ ಒಳಗೆ ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಆರೋಪಿಗಳನ್ನು ಬಂಧಿಸುವ ತಾಕತ್ತು ಯಾಕಿಲ್ಲ ಎಂದು ಅವರು ಪ್ರಶ್ನಿಸಿದರು.
ಮಾಜಿ ರಾಜ್ಯ ವಕ್ತಾರ ವಿಕಾಸ್ ಪುತ್ತೂರು ಮಾತನಾಡಿ, ದೇವಸ್ಥಾನದ ಹುಂಡಿಯಿಂದ ಕದಿಯುವ ಹಣ ಆರಾಧನ ಎಂಬ ಯೋಜನೆಗೆ ಹೋಗುತ್ತಿದ್ದು, ಈ ಹಣವನ್ನು ಅನ್ಯಕೋಮಿನ ದೇವಾಲಯಗಳಿಗೆ ಬಳಸಬಹುದು ,ಮಸೀದಿಗಳಿಗೆ ಚರ್ಚ್ ಗಳಿಗೆ ಹಿಂದೂ ದೇವಸ್ಥಾನದ ಹಣವನ್ನು ನೀಡಲು ಹೊರಟ ಹಿಂದೂ ವಿರೋಧಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಸುಲೋಚನ ಜಿ.ಕೆ.ಭಟ್, ದೇವದಾಸ್ ಶೆಟ್ಟಿ, ಡೊಂಬಯ್ಯ ಅರಳ, ವಜ್ರನಾಥ್ ಕಲ್ಲಡ್ಕ, ಕಮಲಾಕ್ಷಿ ಕೆ.ಪೂಜಾರಿ, ಲಖಿತಾ ಆರ್ ಶೆಟ್ಟಿ, ರಾಮ್ ದಾಸ್ ಬಂಟ್ವಾಳ, ಚೆನ್ನಪ್ಪ ಕೋಟ್ಯಾನ್, ತುಂಗಪ್ಪ ಬಂಗೇರ, ದಿನೇಶ್ ಅಮ್ಟೂರು, ರವೀಶ್ ಶೆಟ್ಟಿ ಕರ್ಕಳ, ಪುರುಷೋತ್ತಮ ಶೆಟ್ಟಿ, ಪುರುಷೋತ್ತಮ ಸಾಲಿಯಾನ್, ಜನಾರ್ದನ ಬೊಂಡಾಲ, ಆನಂದ ಶಂಭೂರು, ಕಿಶೋರ್ ಪಲ್ಲಿಪಾಡಿ, ಮೋನಪ್ಪ ದೇವಸ್ಯ, ಶುಭಕರ ಶೆಟ್ಟಿ, ಚಿದಾನಂದ ರೈ ಕಕ್ಯ, ಸಂತೋಷ್ ರಾಯಿಬೆಟ್ಟು, ಕೇಶವ ದೈಪಲ, ರಮನಾಥ ರಾಯಿ, ಕಾರ್ತಿಕ್ ಬಲ್ಲಾಳ್, ರೋನಾಲ್ಡ್ ಡಿ”ಸೋಜ, ವಸಂತ ಕಕ್ಯಪದವು, ದಿನೇಶ್ ಶೆಟ್ಟಿ ದಂಬೆದಾರ್, ಗಣೇಶ್ ರೈ ಮಾಣಿ, ವಿಜಯ್ ರೈ, ಮೋಹನ್ ಪಿ.ಎಸ್.ಸದಾನಂದ ನಾವೂರ, ಹರೀಶ್ ರೈ ಪೆರಾಜೆ, ಗೋವಿಂದ ಪ್ರಭು, ಹರಿಪ್ರಸಾದ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.