ನಮಸ್ಕಾರ, ಪ್ರತಿ ವರ್ಷ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು, ಸ್ನೇಹಿತರು ಒಳ್ಳೆ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ರಕ್ತದಾನ, ಅನ್ನದಾನ, ಬಡಮಕ್ಕಳಿಗೆ ಸಹಾಯ ಹೀಗೆ ತಮ್ಮದೇ ಆದ ಸಣ್ಣ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ. ಹಾಗೆಯೇ, ಈ ವರ್ಷ ನಾನು ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂಗ ಮತ್ತು ಅಂಗಾಂಶ ದಾನ ಮಾಡಿದ್ದೇನೆ. ಅದರ ಪ್ರಕ್ರಿಯೆ ಬಹಳ ಸುಲಭ. ನಮ್ಮ ಒಂದು ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಯುತ್ತದೆ ಅಂದ್ರೆ ಅದಕ್ಕಿಂತ ದೊಡ್ಡ ಕೆಲಸ ಬೇರೆ ಇಲ್ಲ. ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಮೂಲಕ ನಾನು ಅಂಗ ಮತ್ತು ಅಂಗಾಂಶ ದಾನ ಮಾಡಿದ್ದೇನೆ. ನೀವು ದಾನ ಮಾಡಿ ಎಂದು ಮನವಿ ಎಂದು ಜನತೆಗೆ ಸುದೀಪ್ ಪತ್ನಿ ಪ್ರಿಯಾ ಅವರು ಕರೆ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಮೂಲಕ ಪ್ರಿಯಾ ಸುದೀಪ್ ಅವರು ಅಂಗ ಮತ್ತು ಅಂಗಾಂಶ ದಾನ
