ಕೋಸ್ಟ್ ಗಾರ್ಡ್ ಸಂಸ್ಥಾಪನಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ಕೋಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ತಮ್ಮ ಶುಭಾಶಯಗಳನ್ನು ಕೋರಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;
“@indiacoastguard ನ 48 ನೇ ಸಂಸ್ಥಾಪನಾ ದಿನದಂದು, ನಾನು ಎಲ್ಲಾ ಕೋಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ನನ್ನ ಶುಭಾಶಯಗಳನ್ನು ಮತ್ತು ಹಾರೈಕೆಗಳನ್ನು ತಿಳಿಸ ಬಯಸುತ್ತೇನೆ. ಸಮುದ್ರ ಸುರಕ್ಷತೆ, ರಾಷ್ಟ್ರೀಯ ಭದ್ರತೆ ಮತ್ತು ಪರಿಸರದ ಕಾಳಜಿಗೆ ಅವರ ಸಮರ್ಪಣೆ ಅಪ್ರತಿಮವಾಗಿದೆ. ಅವರ ಅಚಲ ಜಾಗರೂಕತೆ ಮತ್ತು ಸೇವೆಗಾಗಿ ಭಾರತ ಅವರನ್ನು ವಂದಿಸುತ್ತದೆ.