ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಲುವಾಂಗ್ ಪ್ರಬಾಂಗ್ ನ ಪ್ರತಿಷ್ಠಿತ ರಾಯಲ್ ಥಿಯೇಟರ್ ನಲ್ಲಿ ಪ್ರದರ್ಶಿಸಿದ ಫಲಕ್ ಫಲಮ್ ಅಥವಾ ಫ್ರಾ ಲಕ್ ಫ್ರಾ ರಾಮ್ ಎಂಬ ಲಾವೋ ರಾಮಾಯಣವನ್ನು ವೀಕ್ಷಿಸಿದರು. ಲಾವೋಸ್ ನಲ್ಲಿ ರಾಮಾಯಣವನ್ನು ಇಂದಿಗೂ ಪಾಲಿಸಲಾಗುತ್ತಿದೆ. ಈ ಮಹಾಕಾವ್ಯವು ಉಭಯ ದೇಶಗಳ ನಡುವೆ ಪಸರಿಸಿರುವ ಪರಂಪರೆ ಮತ್ತು ಹಳೆಯ ನಾಗರಿಕತೆಯ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಹಲವಾರು ಅಂಶಗಳನ್ನು ಲಾವೋಸ್ ನಲ್ಲಿ ಶತಮಾನಗಳಿಂದ ಆಚರಿಸಲಾಗುತ್ತಿದ್ದು ಅದನ್ನು ಸಂರಕ್ಷಿಸಲಾಗಿದೆ. ಎರಡೂ ದೇಶಗಳು ತಮ್ಮ ನಡುವೆ ಪಸರಿಸಿರುವ ಪರಂಪರೆಯನ್ನು ಮುಂದುವರೆಸಲು ನಿಕಟವಾಗಿ ಕೆಲಸ ಮಾಡುತ್ತಿವೆ. ಭಾರತೀಯ ಪುರಾತತ್ವ ಸಮೀಕ್ಷೆಯು ಲಾವೋಸ್ ನ ವ್ಯಾಟ್ ಫೌ ದೇವಾಲಯ ಮತ್ತು ಅದಕ್ಕೆ ಸಂಬಂಧಿತ ಸ್ಮಾರಕಗಳನ್ನು ಪುನಃಸ್ಥಾಪಿಸುವಲ್ಲಿ ತೊಡಗಿದೆ. ಗೃಹ ವ್ಯವಹಾರಗಳ ಸಚಿವರು, ಶಿಕ್ಷಣ ಮತ್ತು ಕ್ರೀಡಾ ಸಚಿವರು, ಬ್ಯಾಂಕ್ ಆಫ್ ಲಾವೋ ಪಿಡಿಆರ್ ನ ಗೌರವಾನ್ವಿತ ಗವರ್ನರ್ ಮತ್ತು ವಿಯೆಂಟಿಯಾನ್ ಮೇಯರ್ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಮಾಯಣ ಪ್ರದರ್ಶನಕ್ಕೂ ಮುನ್ನ ಪ್ರಧಾನಮಂತ್ರಿಯವರು ವಿಯೆಂಟಿಯಾನ್ ನ ಸಿ ಸಾಕೇತ್ ದೇವಾಲಯದ ಪೂಜ್ಯ ಮಠಾಧೀಶರಾದ ಪೂಜ್ಯ ಮಹಾವೇತ್ ಮಸೇನಾಯ್ ಅವರ ನೇತೃತ್ವದಲ್ಲಿ ಲಾವೋ ಪಿಡಿಆರ್ ನ ಕೇಂದ್ರ ಬೌದ್ಧ ಫೆಲೋಶಿಪ್ ಸಂಘಟನೆಯ ಹಿರಿಯ ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದರು. ಉಭಯ ದೇಶಗಳ ನಡುವೆ ಹಂಚಿಕೊಂಡಿರುವ ಬೌದ್ಧ ಪರಂಪರೆಯು ಭಾರತ ಮತ್ತು ಲಾವೋಸ್ ನಡುವಿನ ನಿಕಟ ನಾಗರಿಕ ಬಂಧದ ಮತ್ತೊಂದು ಮಜಲನ್ನು ಪ್ರತಿನಿಧಿಸುತ್ತದೆ.