ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 26ರಂದು(ಇಂದು) ಮಹಾರಾಷ್ಟ್ರದ ಪುಣೆಗೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಜಿಲ್ಲಾ ನ್ಯಾಯಾಲಯ ಮೆಟ್ರೋ ನಿಲ್ದಾಣದಲ್ಲಿ ಅವರು ಜಿಲ್ಲಾ ನ್ಯಾಯಾಲಯ-ಪುಣೆಯ ಸ್ವರ್ಗೇಟ್ ವರೆಗೆ ಸಂಚರಿಸುವ ಮೆಟ್ರೋ ರೈಲಿಗೆ ಹಸಿರುನಿಶಾನೆ ತೋರಲಿದ್ದಾರೆ. ನಂತರ ಸಂಜೆ 6:30ರ ಸುಮಾರಿಗೆ ಅವರು ಸುಮಾರು 20,900 ಕೋಟಿ ರೂ. ವೆಚ್ಚದ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.
ಪುಣೆ ಮೆಟ್ರೋ ವಿಭಾಗದ ಉದ್ಘಾಟನೆಯು ಜಿಲ್ಲಾ ನ್ಯಾಯಾಲಯದಿಂದ ಸ್ವರ್ಗೇಟ್‌ವರೆಗಿನ ಪುಣೆ ಮೆಟ್ರೋ ರೈಲು ಯೋಜನೆ(ಹಂತ-1) ಪೂರ್ಣಗೊಂಡಿರುವುದನ್ನು ಸೂಚಿಸುತ್ತದೆ. ಜಿಲ್ಲಾ ನ್ಯಾಯಾಲಯ-ಸ್ವರ್ಗೇಟ್ ನಡುವಿನ ಭೂಗತ ಮಾರ್ಗ ನಿರ್ಮಾಣಕ್ಕೆ ಸುಮಾರು 1,810 ಕೋಟಿ ರೂ. ವೆಚ್ಚವಾಗಿದೆ.
ಇದಲ್ಲದೆ, ಸುಮಾರು 2,950 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ಪುಣೆ ಮೆಟ್ರೋ ಹಂತ-1ರ ಸ್ವರ್ಗೇಟ್-ಕಟ್ರಾಜ್ ಮಾರ್ಗ ವಿಸ್ತರಣೆಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 5.46 ಕಿಮೀ ಉದ್ದದ ಪುಣೆ ದಕ್ಷಿಣ ಭಾಗದ ಮಾರ್ಗ ವಿಸ್ತರಣೆಯು ಮಾರ್ಕೆಟ್ ಯಾರ್ಡ್, ಪದ್ಮಾವತಿ ಮತ್ತು ಕಾಟ್ರಾಜ್ ಎಂಬ 3 ನಿಲ್ದಾಣಗಳನ್ನು ಸಂಪರ್ಕಿಸುವ ಸಂಪೂರ್ಣ ಭೂಗತ ಮಾರ್ಗವಾಗಿದೆ.
ಭಿದೇವಾಡದಲ್ಲಿ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಸ್ಮರಣಾರ್ಥದ ಚೊಚ್ಚಲ ಬಾಲಕಿಯರ ಶಾಲೆ ಕಟ್ಟಡ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸೂಪರ್‌ಕಂಪ್ಯೂಟಿಂಗ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಪ್ರಧಾನಿ ಬದ್ಧತೆಗೆ ಅನುಗುಣವಾಗಿ, ಮೋದಿ ಅವರು ಸುಮಾರು 130 ಕೋಟಿ ರೂ ಮೌಲ್ಯದ 3 ಪರಮ್ ರುದ್ರ ಸೂಪರ್‌ಕಂಪ್ಯೂಟರ್‌ಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಮಿಷನ್(ಎನ್ಎಸ್ಎಂ) ಅಡಿ, ಇವುಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಸೂಪರ್ ಕಂಪ್ಯೂಟರ್‌ಗಳನ್ನು ಪುಣೆ, ದೆಹಲಿ ಮತ್ತು ಕೋಲ್ಕತಾದಲ್ಲಿ ಪ್ರವರ್ತಕ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗುವಂತೆ ನಿಯೋಜಿಸಲಾಗಿದೆ. ಪುಣೆಯಲ್ಲಿರುವ ದೈತ್ಯ ಮೀಟರ್ ರೇಡಿಯೊ ಟೆಲಿಸ್ಕೋಪ್(ಜಿಎಂಆರ್|ಟಿ) ವೇಗದ ರೇಡಿಯೊ ಸ್ಫೋಟಗಳು (ಎಫ್ಆರ್|ಬಿಗಳು) ಮತ್ತು ಇತರೆ ಖಗೋಳ ವಿದ್ಯಮಾನಗಳನ್ನು ಅನ್ವೇಷಿಸಲು ಸೂಪರ್‌ಕಂಪ್ಯೂಟರ್ ಅನ್ನು ನಿಯಂತ್ರಿಸುತ್ತದೆ. ದೆಹಲಿಯಲ್ಲಿರುವ ಇಂಟರ್ ಯೂನಿವರ್ಸಿಟಿ ವೇಗವರ್ಧಕ ಕೇಂದ್ರ(ಐಯುಎಸಿ)ವು ವಸ್ತು ವಿಜ್ಞಾನ ಮತ್ತು ಪರಮಾಣು ಭೌತಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಸಂಶೋಧನೆ ಹೆಚ್ಚಿಸುತ್ತದೆ. ಕೋಲ್ಕತ್ತಾದ ಎಸ್.ಎನ್. ಬೋಸ್ ಸೆಂಟರ್ ಭೌತಶಾಸ್ತ್ರ, ವಿಶ್ವವಿಜ್ಞಾನ ಮತ್ತು ಭೂ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಮುಂದುವರಿದ ಸಂಶೋಧನೆಗೆ ಚಾಲನೆ ನೀಡುತ್ತದೆ.
ಪ್ರಧಾನಿ ಅವರು ಸುಮಾರು 225 ಕೋಟಿ ರೂಪಾಯಿ ಮೌಲ್ಯದ 1,500 ಇ20 (20% ಎಥೆನಾಲ್ ಮಿಶ್ರಿತ) ಪೆಟ್ರೋಲ್ ಬಿಡಿ ಮಾರಾಟ ಮಳಿಗೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.