ನವದೆಹಲಿ: ಜೈನ ಸಂತ ಆಚಾರ್ಯ ಶ್ರೀ 108 ವಿದ್ಯಾನಂದ  ಜಿ. ಮಹಾರಾಜ್ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ `ಧರ್ಮ ಚಕ್ರವರ್ತಿ’  ಎಂಬ ಬಿರುದನ್ನು ಪ್ರದಾನ ಮಾಡಲಾಯಿತು. ಇದನ್ನೂ ಓದಿ : ವಿಷ ಪ್ರಾಷನದಿಂದಲೇ 5 ಹುಲಿಗಳು ಸಾವು: ಖಚಿತ ಪಡಿಸಿದ ಸಿಸಿಎಫ್ ಹೀರಾಲಾಲ್

ಈ ಗೌರವವನ್ನು ನಮ್ರತೆಯಿಂದ ಸ್ವೀಕರಿಸಿದ ಪ್ರಧಾನಿ ಮೋದಿ , ನಾನು ಇದಕ್ಕೆ ಸೂಕ್ತನೆಂದು ಭಾವಿಸುವುದಿಲ್ಲ. ಆದರೆ ನಾವು ಸಂತರಿಂದ ಏನೇ ಸ್ವೀಕರಿಸಿದರೂ ಅದನ್ನು ಪ್ರಸಾದ ಎಂದು ಸ್ವೀಕರಿಸುವುದು ನಮ್ಮ ಸಂಸ್ಕೃತಿ. ಆದ್ದರಿಂದ, ನಾನು ಈ ಪ್ರಸಾದವನ್ನು ವಿನಮ್ರವಾಗಿ ಸ್ವೀಕರಿಸಿ ಭಾರತ ಮಾತೆಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಪ್ರಧಾನಿ ಮೋದಿ ಅವರು 1987ರ ಜೂನ್ 28 ರಂದು ಆಚಾರ್ಯ ವಿದ್ಯಾನಂದರಿಗೆ ‘ಆಚಾರ್ಯ’ ಎಂಬ ಬಿರುದು ದೊರೆತಿತ್ತು ಎಂದು ಹೇಳಿದರು. ಇದು ಕೇವಲ ಗೌರವವಲ್ಲ, ಬದಲಾಗಿ ಜೈನ ಸಂಸ್ಕೃತಿಯನ್ನು ಸಂಯಮ ಮತ್ತು ಕರುಣೆಗೆ ಸಂಪರ್ಕಿಸುವ ಪವಿತ್ರ ಧಾರ ಎಂದು ಅವರು ಹೇಳಿದರು. ಈ ಆಚರಣೆಗಳು ಶಿಸ್ತುಬದ್ಧ, ತಪಸ್ವಿ ಜೀವನದ ಜ್ಞಾಪನೆ ಎಂದು ಬಣ್ಣಿಸುತ್ತಾ ಪ್ರಧಾನಿ ಆಚಾರ್ಯರಿಗೆ ಗೌರವ ಸಲ್ಲಿಸಿದರು.  ಇದನ್ನೂ ಓದಿ : 5 ಹುಲಿಗಳ ನಿಗೂಢ ಸಾವು – ವಿಷ ಹಾಕಿದ್ದ ದುಷ್ಕರ್ಮಿ ಸೇರಿ ಐವರು ವಶಕ್ಕೆ

ಭಾರತದ ಸಾಂಸ್ಕೃತಿ ಕ ಪರಂಪರೆಯನ್ನು ಪ್ರತಿಬಿಂಬಿಸುತ್ತಾ ಭಾರತವು ವಿಶ್ವದ ಅತ್ಯಂತ ಹಳೆಯ ಜೀವಂತ ಸಂಸ್ಕೃತಿಯಾಗಿದೆ. ನಮ್ಮ ವಿಚಾರಗಳು, ಆಲೋಚನೆಗಳು ಮತ್ತು ತತ್ವಶಾಸ್ತ್ರವು ಅಮರವಾಗಿರುವುದರಿಂದ ನಾವು ಸಾವಿರಾರು ವರ್ಷಗಳಿಂದ ಅಮರರಾಗಿದ್ದೇವೆ ಎಂದರು.

ಶತಮಾನೋತ್ಸವದ ಗೌರವದ ಭಾಗವಾಗಿ, ಪ್ರಧಾನಿ ಮೋದಿ ಮತ್ತು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜ್ ಅವರನ್ನು ಗೌರವಿಸುವ ಸ್ಮರಣಾರ್ಥ ಅಂಚೆ ಚೀಟಿಗಳ ಸರಣಿಯನ್ನು ಬಿಡುಗಡೆ ಮಾಡಿದರು.