ಬಂಟ್ವಾಳ: ಯಾವುದೇ ಕೆಲಸದ ಹಿಂದೆ ಸಮಾಜಕ್ಕೆ ಒಳಿತಾಗುವ ಚಿಂತನೆ ಇರಬೇಕು ಪ್ರತಿಯೊಂದು ಕೆಲಸ ದೇವರ ಕೆಲಸವಾಗಬೇಕು ಎಂದು ಉಡುಪಿ ಅದಮಾರು ಮಠದ ಈಶ ಪ್ರಿಯ ತೀರ್ಥ ಸ್ವಾಮಿಜಿ ಹೇಳಿದರು.

ಅವರು ನ.22ರಂದು ಬಂಟ್ವಾಳ ತಾಲೂಕಿನ ಪುದು ಗ್ರಾಮದ ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ನಡೆದ 45 ದಿನಗಳ ಗೋ ರಥಯಾತ್ರೆ, ಅಷ್ಟೋತ್ತರ ಶತ (108) ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.

 ಭಾಗವತದ ಪ್ರತಿಯೊಂದು ಅರ್ಥದಲ್ಲಿಯೂ ನಾವು ದೇವರನ್ನು ಕಾಣುತ್ತೇವೆ. ಭಕ್ತಿ ಮಾರ್ಗದಲ್ಲಿ ಸಾಗಿ ಶ್ರದ್ಧೆಯಿಂದ ಗೋ ರಕ್ಷಣೆ ಹಾಗೂ ಗೋ ಉತ್ಪನ್ನಗಳ ಮಹತ್ವವನ್ನು ಅರಿಯಬೇಕು. ದಿನದ ಕನಿಷ್ಟ ಸಮಯವನ್ನಾದರೂ ಭಾಗವತ ಶ್ರವಣ ಮಾಡಲು ಪ್ರಯತ್ನಿಸೋಣ, ನಾವು ಬೆಳೆದು ರಾಷ್ಟçವನ್ನು ಬೆಳೆಸೋಣ ಎಂದರು.

ಇದೇ ಸಂದರ್ಭದಲ್ಲಿ ಮಹಾಯಾಗದಲ್ಲಿ ಉತ್ಪತ್ತಿಯಾದ ದಿವ್ಯ ಔಷಧಿಯನ್ನು ಸಂಕೇತಿಕವಾಗಿ ವಿತರಿಸಿ, ಸೇವಾರ್ಥಿಗಳನ್ನು ಸ್ವಾಮೀಜಿ ಹರಸಿ ಹಾರೈಸಿದರು.

ವೇದಿಕೆಯಲ್ಲಿ ವೃಂದಾವನದ ಬ್ರೀಜೇಶ್ ಗೊಸ್ವಾಮಿ, ರಾಷ್ಟಿçà ಗೋ ಸೇವಾ ಗತಿವಿಧಿಯ ಅಜಿತ್ ಮಹಾಪಾತ್ರ, ರಾಧಾ ಸುರಭಿ ಗೋಮಂದಿರದ ಭಕ್ತಿ ಭೂಷಣ್ ಪ್ರಭುಜಿ, ಗೋ ಸೇವಾಗತಿವಿಧಿಯ ಪ್ರವೀಣ್ ಸರಳಾಯ, ಶೋಭಾ ಮಯ್ಯಜಿ, ರೂಪಾ ಮಾತಾಜಿ ಸಮಿತಿ ಪದಾಧಿಕಾರಿಗಳಾದ ವಿಜಯ, ಪ್ರಕಾಶ ಮಲ್ಪೆ , ಎಂ.ಆರ್. ನಾಯರ್, ರಾಮಚಂದ್ರ ಮಾರಿಪಲ್ಲ, ಪದ್ಮನಾಭ ಶೆಟ್ಟಿ , ಆನಿಲ್ ಪಂಡಿತ್, ವಸಂತಿ ಶೆಟ್ಟಿ ಉಪಸ್ಥಿತರಿದ್ದರು.

ಭಕ್ತಿಭೂಷಣ್ದಾಸ್ ಪ್ರಭುಜಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮವನ್ನು ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಸ್ವಾಗತಿಸಿದರು. ಉತ್ಸವ ಸಮಿತಿ ಕಾರ್ಯಾಧ್ಯಕ್ಷ ತೆÃವು ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕ ಮಾತನಾಡಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.