ಭಾರತದ ಮೂಲಸೌಕರ್ಯ ಅಭಿವೃದ್ಧಿ ಪಯಣಕ್ಕೆ ವೇಗ ನೀಡುವಲ್ಲಿ ಪಿಎಂ ಗತಿಶಕ್ತಿ ನಿರ್ಣಾಯಕ ಪಾತ್ರ: ಪ್ರಧಾನಮಂತ್ರಿ
ಗತಿಶಕ್ತಿ ಯೋಜನೆ ಜಾರಿಗೆ ಬಂದು ಮೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ ಮಂಟಪಂನಲ್ಲಿನ ಅನುಭೂತಿ ಕೇಂದ್ರಕ್ಕೆ ಭೇಟಿ ನೀಡಿದರು. ಭಾರತದ ಮೂಲಸೌಕರ್ಯ ಅಭಿವೃದ್ಧಿಯ ಪಯಣಕ್ಕೆ ವೇಗ ನೀಡುವಲ್ಲಿ ಪಿಎಂ ಗತಿ ಶಕ್ತಿ ಯೋಜನೆಯು ನಿರ್ಣಾಯಕ ಪಾತ್ರ ವಹಿಸಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಗತಿಶಕ್ತಿ ಇಂದಿಗೆ ಮೂರು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಭಾರತ ಮಂಟಪಂಗೆ ತೆರಳಿ ಅಲ್ಲಿನ ಅನುಭೂತಿ ಕೇಂದ್ರಕ್ಕೆ ಭೇಟಿ ನೀಡಿದೆ. ಈ ಕೇಂದ್ರದಲ್ಲಿ ಈ ಉಪಕ್ರಮದ ಪರಿವರ್ತನಕಾರಿ ಶಕ್ತಿಯ ಅನುಭವವನ್ನು ಪಡೆದೆ.”
“ಭಾರತದ ಮೂಲಸೌಕರ್ಯ ಅಭಿವೃದ್ಧಿ ಪಯಣಕ್ಕೆ ವೇಗ ನೀಡುವಲ್ಲಿ ಪಿಎಂ ಗತಿಶಕ್ತಿ ನಿರ್ಣಾಯಕ ಪಾತ್ರ ವಹಿಸಿದೆ. ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳುವುದನ್ನು ಖಾತರಿಪಡಿಸಲು ಮತ್ತು ಸಂಭಾವ್ಯ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನವನ್ನು ಅತ್ಯದ್ಭುತವಾಗಿ ಬಳಕೆ ಮಾಡುತ್ತಿದೆ”.