ಭಾರತೀಯ ಕರಾವಳಿ ರಕ್ಷಣಾ ಪಡೆಗಳ ಸ್ಥಾಪನಾ ದಿನದಂದು, ನಮ್ಮ ವಿಶಾಲ ಕರಾವಳಿಯನ್ನು ರಕ್ಷಿಸುವಲ್ಲಿನ ಶೌರ್ಯ, ಸಮರ್ಪಣೆ ಮತ್ತು ನಿರಂತರ ಜಾಗರೂಕತೆಗಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಕರಾವಳಿ ರಕ್ಷಣಾ ಪಡೆಯನ್ನು ಶ್ಲಾಘಿಸಿದ್ದಾರೆ.

Indian Coast Guard , Ministry of Defence, Government of India
ಸಮುದ್ರ ಭದ್ರತೆಯಿಂದ ವಿಪತ್ತು ಪ್ರತಿಕ್ರಿಯೆಯವರೆಗೆ, ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳಿಂದ ಪರಿಸರ ರಕ್ಷಣೆಯವರೆಗೆ, ಭಾರತೀಯ ಕರಾವಳಿ ರಕ್ಷಣಾ ಪಡೆ ನಮ್ಮ ಸಮುದ್ರಗಳ ಅಸಾಧಾರಣ ಹಾಗೂ ವಿಶೇಷ ರಕ್ಷಕರಾಗಿದ್ದು, ನಮ್ಮ ನೀರು ಮತ್ತು ಜನರ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

Indian Coast Guard , Ministry of Defence, Government of India
ಪ್ರಧಾನಮಂತ್ರಿಗಳು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;
“ಇಂದು, ಅವರ ಸ್ಥಾಪನಾ ದಿನದಂದು, ನಮ್ಮ ವಿಶಾಲ ಕರಾವಳಿಯನ್ನು ಶೌರ್ಯ, ಸಮರ್ಪಣೆ ಮತ್ತು ನಿರಂತರ ಜಾಗರೂಕತೆಯಿಂದ ರಕ್ಷಿಸಿದ್ದಕ್ಕಾಗಿ ನಾವು ಭಾರತೀಯ ಕರಾವಳಿ ರಕ್ಷಣಾ ಪಡೆಗಳನ್ನು ಶ್ಲಾಘಿಸುತ್ತೇವೆ.

Indian Coast Guard , Ministry of Defence, Government of India
ಕಡಲ ಭದ್ರತೆಯಿಂದ ವಿಪತ್ತು ಪ್ರತಿಕ್ರಿಯೆಯವರೆಗೆ, ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳಿಂದ ಪರಿಸರ ರಕ್ಷಣೆಯವರೆಗೆ, ಭಾರತೀಯ ಕರಾವಳಿ ರಕ್ಷಣಾ ಪಡೆ ನಮ್ಮ ಸಮುದ್ರಗಳ ಅಸಾಧಾರಣ ರಕ್ಷಕರಾಗಿದ್ದು, ನಮ್ಮ ನೀರು ಮತ್ತು ಜನರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.