ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ಪುಟ್ಟಪರ್ತಿಯ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಿದರು.
ಮೋದಿಯವರು ತೆಲುಗಿನಲ್ಲಿ ರಂಗನಾಥ ರಾಮಾಯಣದ ಶ್ಲೋಕಗಳನ್ನು ಕೇಳಿದರು ಮತ್ತು ಆಂಧ್ರಪ್ರದೇಶದ ಥೋಲು ಬೊಮ್ಮಲತಾ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ನೆರಳು ಬೊಂಬೆಯಾಟದ ಕಲಾ ಪ್ರಕಾರದ ಮೂಲಕ ದೃಷ್ಟಿಗೋಚರವಾಗಿ ಪ್ರಸ್ತುತಪಡಿಸಿದ ಜಟಾಯು ಕಥೆಯನ್ನು ವೀಕ್ಷಿಸಿದರು.
ಪ್ರಧಾನ ಮಂತ್ರಿ X ನಲ್ಲಿ ಪೋಸ್ಟ್ ಮಾಡಿದ್ದಾರೆ:
“ಪ್ರಭು ಶ್ರೀರಾಮನ ಭಕ್ತರಾದ ಎಲ್ಲರಿಗೂ, ಲೇಪಾಕ್ಷಿಗೆ ಹೆಚ್ಚಿನ ಮಹತ್ವವಿದೆ. ಇಂದು ವೀರಭದ್ರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಗೌರವ ನನಗೆ ಸಿಕ್ಕಿದೆ. ಭಾರತದ ಜನರು ಸಂತೋಷದಿಂದ, ಆರೋಗ್ಯವಾಗಿರಲಿ ಮತ್ತು ಸಮೃದ್ಧಿಯ ಹೊಸ ಎತ್ತರಗಳನ್ನು ಏರಲಿ ಎಂದು ನಾನು ಪ್ರಾರ್ಥಿಸಿದೆ.