ನಿಮ್ಹಾನ್ಸ್ ಬೆಂಗಳೂರು ಉತ್ತರ ಕ್ಯಾಂಪಸ್‌ನಲ್ಲಿ 498 ಕೋಟಿ ರೂ. ವೆಚ್ಚದ 300 ಹಾಸಿಗೆಗಳ ಪಾಲಿಟ್ರಾಮಾ ಕೇಂದ್ರವನ್ನು ಸ್ಥಾಪಿಸಲು ಅನುಮೋದನೆ ಕೊಟ್ಟ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ.ನಡ್ಡಾ ಅವರಿಗೆ ಕನ್ನಡಿಗರ ಪರವಾಗಿ ಹೃದಯಪೂರ್ವಕ ಧನ್ಯವಾದಗಳು. ಇದನ್ನೂ ಓದಿ : ನಿರ್ದಿಷ್ಟ ಗುರಿಯೊಂದಿಗೆ ಯುವವಾಹಿನಿಯ ಸಂಘಟಿತ ಪಯಣ – ಭುವನೇಶ್ ಪಚ್ಚಿನಡ್ಕ
ಪಾಲಿಟ್ರಾಮಾ ಕೇಂದ್ರವು ಕೈಗೆಟುಕುವ ವೆಚ್ಚದಲ್ಲಿ ಅಗತ್ಯವಿರುವ ರೋಗಿಗಳಿಗೆ ಸಕಾಲಿಕ ಚಿಕಿತ್ಸೆ ನೀಡಲು ಅನುಕೂಲಕರವಾಗಿದೆ. ದೇಶದ ಪ್ರಮುಖ ಮಾನಸಿಕ ಆರೋಗ್ಯ ಸಂಸ್ಥೆಯಾದ ನಿಮ್ಹಾನ್ಸ್‌ನಲ್ಲಿ ಹೊರರೋಗಿಗಳ ಸಂಖ್ಯೆ ದಿನಕ್ಕೆ ಸುಮಾರು 250 ರೋಗಿಗಳಿಂದ ಈಗ 2,500 ಕ್ಕೆ ಏರಿಕೆಯಾಗಿದೆ. ನೂತನ ಪಾಲಿಟ್ರಾಮಾ ಕೇಂದ್ರದಿಂದಾಗಿ ಸಾಕಷ್ಟು ರೋಗಿಗಳು ಚಿಕಿತ್ಸೆ ಪಡೆಯಲು ಸಹಾಯಕವಾಗಿದೆ.
ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರದ ಅವಧಿಯಲ್ಲಿ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿ, 39 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. 300 ಹಾಸಿಗೆಗಳ ಪಾಲಿಟ್ರಾಮಾ ಕೇಂದ್ರ ಸ್ಥಾಪನೆಗಾಗಿ ಬಿಜೆಪಿ ಸತತ ಪ್ರಯತ್ನದಿಂದಾಗಿ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ : ಪ್ರಧಾನಿ ಮೋದಿಗೆ `ಧರ್ಮ ಚಕ್ರವರ್ತಿ’ ಬಿರುದು ಪ್ರದಾನ