ಸೃಜನಶೀಲತೆ, ಸುಸ್ಥಿರತೆ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಒಟ್ಟುಗೂಡಿಸುವಲ್ಲಿ ಅಹಮದಾಬಾದ್ ಪುಷ್ಪ ಪ್ರದರ್ಶನದ ಗಮನಾರ್ಹ ಪಾತ್ರಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಈ ಕಾರ್ಯಕ್ರಮವು ನಗರದ ವೈವಿದ್ಯಮಯ ಚೈತನ್ಯ ಮತ್ತು ಪ್ರಕೃತಿಯ ಮೇಲಿನ ನಿರಂತರ ಪ್ರೀತಿಯನ್ನು ಸುಂದರವಾಗಿ ಪ್ರದರ್ಶಿಸುತ್ತದೆ ಎಂದು ಹೇಳಿದ್ದಾರೆ.

ಪ್ರದರ್ಶನದ ಮಹತ್ವವನ್ನು ಉಲ್ಲೇಖಿಸುತ್ತಾ, ಪ್ರಧಾನಮಂತ್ರಿಯವರು ಕಳೆದ ಹಲವು ವರ್ಷಗಳಲ್ಲಿ ಅದು ಹೇಗೆ ಗಾತ್ರ, ಪ್ರಮಾಣದಲ್ಲಿ ಮತ್ತು ಪರಿಕಲ್ಪನೆಯಲ್ಲಿ ಬೆಳೆದಿದೆ, ಅಹಮದಾಬಾದ್ ನ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಪರಿಸರ ಪ್ರಜ್ಞೆಯ ಸಂಕೇತವಾಗಿದೆ ಎಂಬುದರ ಕುರಿತು ವಿವರಿಸಿದರು.

ಗುಜರಾತ್ ಮುಖ್ಯಮಂತ್ರಿಯವರ  ಎಕ್ಸ್ ಖಾತೆಯ ಸಂದೇಶಕ್ಕೆ  ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:

“ಅಹಮದಾಬಾದ್ ಪುಷ್ಪ ಪ್ರದರ್ಶನವು ಸೃಜನಶೀಲತೆ, ಸುಸ್ಥಿರತೆ ಮತ್ತು ಸಮುದಾಯ ಭಾಗವಹಿಸುವಿಕೆಯನ್ನು ಒಟ್ಟುಗೂಡಿಸುತ್ತದೆ, ಅದೇ ಸಮಯದಲ್ಲಿ ನಗರದ ವೈವಿದ್ಯಮಯ ಚೈತನ್ಯ ಮತ್ತು ಪ್ರಕೃತಿಯ ಮೇಲಿನ ಪ್ರೀತಿಯನ್ನು ಸುಂದರವಾಗಿ ಪ್ರದರ್ಶಿಸುತ್ತದೆ. ಕಳೆದ ಹಲವು ವರ್ಷಗಳಲ್ಲಿ ಈ ಪುಷ್ಪ ಪ್ರದರ್ಶನವು ಹೇಗೆ ಗಾತ್ರ, ಪ್ರಮಾಣದಲ್ಲಿ ಮತ್ತು ಪರಿಕಲ್ಪನೆಯಲ್ಲಿ ಬೆಳೆದಿದೆ ಎಂಬುದು ಶ್ಲಾಘನೀಯ ಸಂಗತಿಯಾಗಿದೆ.”