ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇರಾನ್ ಅಧ್ಯಕ್ಷರಾದ ಮಾನ್ಯ ಡಾ. ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಆ ಪ್ರದೇಶದಲ್ಲಿನ ಪ್ರಚಲಿತ ಪರಿಸ್ಥಿತಿಯ ಕುರಿತು ವಿವರವಾದ ಮಾತುಕತೆ ನಡೆಸಿದರು.ಇದನ್ನೂ ಓದಿ : ಕಿಲ್ಲರ್‌ ಲೇಡಿಯಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

ಇತ್ತೀಚಿನ ಉದ್ವಿಗ್ನತೆಗಳ ಬಗ್ಗೆ ಪ್ರಧಾನಮಂತ್ರಿಗಳು ಸಂಭಾಷಣೆ ವೇಳೆ ತೀವ್ರ ಕಳವಳ ವ್ಯಕ್ತಪಡಿಸಿದರು. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ ಅವರು, ದೀರ್ಘಕಾಲೀನ ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಅತ್ಯಗತ್ಯ ಎಂದು ಪುನರುಚ್ಚರಿಸಿದರು.

ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಹೇಳಿದ್ದಾರೆ:

“ಇರಾನ್ ಅಧ್ಯಕ್ಷರಾದ @drpezeshkian ಅವರೊಂದಿಗೆ ಮಾತನಾಡಿದೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಾವು ವಿವರವಾಗಿ ಚರ್ಚಿಸಿದೆವು. ಇತ್ತೀಚಿನ ಉದ್ವಿಗ್ನತೆಗಳ ಉಲ್ಬಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃ ಸ್ಥಾಪಿಸಲು ಮುಂದಿನ ನಡೆಯಾಗಿ ಉದ್ವಿಗ್ನತೆ ತೀವ್ರತೆಯ ತತ್ ಕ್ಷಣದ ಇಳಿಕೆ, ಮಾತುಕತೆ ಮತ್ತು ರಾಜತಾಂತ್ರಿಕತೆಗೆ ನಮ್ಮ ಕರೆಯನ್ನು ಪುನರುಚ್ಚರಿಸಿದೆವು.”