ದೋಹಾ ಡೈಮಂಡ್ ಲೀಗ್ 2025 ರಲ್ಲಿ 90 ಮೀಟರ್ ಗೂ‌ ದೂರದ ಎಸೆತದೊಂದಿಗೆ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದ ನೀರಜ್ ಚೋಪ್ರಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. “ಇದು ಅವರ ಅವಿರತ ಸಮರ್ಪಣೆ, ಶಿಸ್ತು ಮತ್ತು ಒಲವಿನ ಫಲಿತಾಂಶ” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ:

“ಅದ್ಭುತ ಸಾಧನೆ! ದೋಹಾ ಡೈಮಂಡ್ ಲೀಗ್ 2025ರಲ್ಲಿ 90 ಮೀಟರ್ ಮೀರಿದ ಎಸೆತದೊಂದಿಗೆ ವೈಯಕ್ತಿಕ ಅತ್ಯುತ್ತಮ ಸಾಧನೆ ತೋರಿರುವ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಅವರ ಅವಿರತ ಸಮರ್ಪಣೆ, ಶಿಸ್ತು ಮತ್ತು ಒಲವಿನಿಂದ ಸಾಧ್ಯವಾಗಿದೆ. ಈ ಸಾಧನೆ ಭಾರತಕ್ಕೆ ಹೆಮ್ಮೆ ಮತ್ತು ಸಂತಸ ತಂದಿದೆ”.