ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ದಟ್ಟ ಮಂಜಿನಿಂದಾಗಿ ವಿಮಾನ ಪತನ; ವಾಚ್‌, ಬಟ್ಟೆಯಿಂದ ಅಜಿತ್‌ ಪವಾರ್‌ ಗುರುತು ಪತ್ತೆ

Posted by Bantwala Isiri News | Jan 28, 2026 | ಬಂಟ್ವಾಳ | 0 |

ದಟ್ಟ ಮಂಜಿನಿಂದಾಗಿ ವಿಮಾನ ಪತನ; ವಾಚ್‌, ಬಟ್ಟೆಯಿಂದ ಅಜಿತ್‌ ಪವಾರ್‌ ಗುರುತು ಪತ್ತೆ
ಮುಂಬೈ: ವಿಮಾನ ಪತನಗೊಂಡು (Plane Crash) ಮೃತಪಟ್ಟ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ (Ajit Pawar) ಅವರ ಮೃತದೇಹವನ್ನು ವಾಚ್‌ ಮತ್ತು ಬಟ್ಟೆಯಿಂದ ಗುರುತಿಸಲಾಗಿದೆ. ಇದನ್ನೂ ಓದಿ : ಶ್ರೀ ಅಜಿತ್ ಪವಾರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಅವರ ಸಂತಾಪ

ಪವಾರ್‌ ಇದ್ದ ವಿಮಾನ ಬುಧವಾರ ಇಳಿಯಲು ಪ್ರಯತ್ನಿಸಿದಾಗ ಬಾರಾಮತಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜು ಮತ್ತು ಕಡಿಮೆ ಗೋಚರತೆ ಇತ್ತು. ಪೈಲಟ್‌ಗೆ ಸರಿಯಾದ ಗೋಚರತೆ ಇಲ್ಲದೇ ವಿಮಾನ ಪತನವಾಗಿರಬಹುದು ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. VSR ವೆಂಚರ್ಸ್ ನಿರ್ವಹಿಸುತ್ತಿದ್ದ ಬೊಂಬಾರ್ಡಿಯರ್ ಲಿಯರ್ಜೆಟ್-45, ವಿಮಾನ ನಿಲ್ದಾಣದದಲ್ಲಿ ಪತನಗೊಂಡು, ಅದರಲ್ಲಿದ್ದ ಐವರು ಮೃತಪಟ್ಟಿದ್ದಾರೆ.

ಬೆಳಗ್ಗೆ ಗೋಚರತೆ ತೀವ್ರವಾಗಿ ಕಡಿಮೆಯಾಗಿತ್ತು. ವಿಮಾನ ಪತನಗೊಂಡ ವಿಚಾರ ತಿಳಿದು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು. ಆದರೆ, ಅಪಘಾತದ ತೀವ್ರತೆಗೆ ಜಿಟ್‌ ಸಂಪೂರ್ಣ ಸುಟ್ಟು ಕರಕಲಾಗಿತ್ತು.

ವಿಮಾನದ ಅವಶೇಷಗಳಲ್ಲಿ ಮೃತದೇಹಗಳನ್ನು ಗುರುತಿಸುವುದು ಕಷ್ಟಕರವಾಗಿತ್ತು. ಪವಾರ್ ದೇಹವನ್ನು ಅವರ ವಾಚ್‌ ಮತ್ತು ಬಟ್ಟೆಗಳನ್ನು ಆಧರಿಸಿ ಗುರುತಿಸಲಾಯಿತು. ಉಳಿದವರನ್ನು ಬಟ್ಟೆ ಮತ್ತು ಅವರ ಇತರೆ ವಸ್ತುಗಳ ಆಧಾರದಲ್ಲಿ ಗುರುತು ಪತ್ತೆ ಮಾಡಲಾಗಿದೆ.
ಪವಾರ್ ತಮ್ಮ ವೈಯಕ್ತಿಕ ಭದ್ರತಾ ಅಧಿಕಾರಿ, ಒಬ್ಬ ಸಹಾಯಕ ಮತ್ತು ಇಬ್ಬರು ಪೈಲಟ್‌ಗಳೊಂದಿಗೆ ಪ್ರಯಾಣಿಸುತ್ತಿದ್ದರು. ಐದು ಮಂದಿ ಪ್ರಯಾಣಿಕರಲ್ಲಿ ಯಾರೂ ಬದುಕುಳಿದಿಲ್ಲ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆ ಆರಂಭಿಸಿದೆ. ವಿಮಾನದ ಅಂತಿಮ ಕ್ಷಣಗಳ ಮಾಹಿತಿ ದಾಖಲಿಸಲು ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ನಿರ್ಣಾಯಕ ಪಾತ್ರ ವಹಿಸುತ್ತವೆ. ಆ ಸಮಯದಲ್ಲಿ ವಿಮಾನ ನಿಲ್ದಾಣದ ಹವಾಮಾನ ವಿವರಗಳು ಸಹ ಅವುಗಳಲ್ಲಿ ದಾಖಲಾಗಿರುತ್ತವೆ.

 

ಅಜಿತ್‌ ಪವಾರ್‌ ಅವರ ಸಾವು ಮಹಾರಾಷ್ಟ್ರದ ರಾಜಕೀಯ ವ್ಯವಸ್ಥೆಗೆ ದೊಡ್ಡ ಆಘಾತ ನೀಡಿದೆ. 66 ವರ್ಷದ ಪವಾರ್ ಅವರು ರಾಜ್ಯದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು. ಉಪಮುಖ್ಯಮಂತ್ರಿಯಾಗಿ ಆರನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದರು.

Share:

Rate:

Previousಶ್ರೀ ಅಜಿತ್ ಪವಾರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಅವರ ಸಂತಾಪ
Nextಚಿರಾಂತನ ಚಾರಿಟೇಬಲ್ ಟ್ರಸ್ಟ್ ಉಕ್ಕುಡ ಇದರ ನೂತನ ವಾಗಿ ನಿರ್ಮಾಣಗೊಳ್ಳುತ್ತಿರುವ ವೃದ್ಧಾಶ್ರಮ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರುಗೊಂಡ 10 ಲಕ್ಷ ಮೊತ್ತದ ಅನುದಾನದ ಮಂಜೂರಾತಿ ಪತ್ರ ಹಸ್ತಾಂತರ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ಬೆಳೆ ಹಾನಿಗೆ ಒಳಗಾದ ರಾಜ್ಯದ ರೈತರ ಖಾತೆಗಳಿಗೆ ಇನ್ ಪುಟ್ ಸಬ್ಸಿಡಿ ವಿತರಿಸುವ ಕಾರ್ಯಕ್ರಮಕ್ಕೆ – ಸಿ.ಎಂ. ಚಾಲನೆ

ಬೆಳೆ ಹಾನಿಗೆ ಒಳಗಾದ ರಾಜ್ಯದ ರೈತರ ಖಾತೆಗಳಿಗೆ ಇನ್ ಪುಟ್ ಸಬ್ಸಿಡಿ ವಿತರಿಸುವ ಕಾರ್ಯಕ್ರಮಕ್ಕೆ – ಸಿ.ಎಂ. ಚಾಲನೆ

27 November 2025

ಫ್ರಾನ್ಸ್ ಪ್ರವಾಸದ ಬಳಿಕ, ಫೆಬ್ರವರಿ 12ರಂದು ಅಮೆರಿಕಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡ ಪ್ರಧಾನಿ ಮೋದಿ

ಫ್ರಾನ್ಸ್ ಪ್ರವಾಸದ ಬಳಿಕ, ಫೆಬ್ರವರಿ 12ರಂದು ಅಮೆರಿಕಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡ ಪ್ರಧಾನಿ ಮೋದಿ

10 February 2025

ಕೇಪು ದೇವಳದಲ್ಲಿ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ಕೇಪು ದೇವಳದಲ್ಲಿ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

15 April 2024

ಬಂಟ್ವಾಳದ ಎಸ್.ವಿ.ಎಸ್‌ಕಾಲೇಜಿನ ವಿದ್ಯಾರ್ಥಿಗೆರಾಜ್ಯಮಟ್ಟದಲ್ಲಿ 9 ನೇ ರ‍್ಯಾಂಕ್

ಬಂಟ್ವಾಳದ ಎಸ್.ವಿ.ಎಸ್‌ಕಾಲೇಜಿನ ವಿದ್ಯಾರ್ಥಿಗೆರಾಜ್ಯಮಟ್ಟದಲ್ಲಿ 9 ನೇ ರ‍್ಯಾಂಕ್

2 October 2024

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಕಡೇಶಿವಾಲಯ ಗ್ರಾಮದ ಬದಿಗುಡ್ಡೆ ದೈವಸ್ಥಾನದ ಸಂಪರ್ಕ ರಸ್ತೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಅನುದಾನದಡಿ 5 ಲಕ್ಷ ಮೊತ್ತದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ
    ಕಡೇಶಿವಾಲಯ ಗ್ರಾಮದ ಬದಿಗುಡ್ಡೆ ದೈವಸ್ಥಾನದ ಸಂಪರ್ಕ ರಸ್ತೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಅನುದಾನದಡಿ 5 ಲಕ್ಷ ಮೊತ್ತದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ
  • ಮಂಗಳೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ಟ್ಯಾಂಕರ್‌ನಲ್ಲಿ ಗ್ಯಾಸ್ ಸೋರಿಕೆ – ಕಲಘಟಗಿ, ಯಲ್ಲಾಪುರ ಮಾರ್ಗದಲ್ಲಿ ಸಂಚಾರ ನಿಷೇಧ
    ಮಂಗಳೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ಟ್ಯಾಂಕರ್‌ನಲ್ಲಿ ಗ್ಯಾಸ್ ಸೋರಿಕೆ – ಕಲಘಟಗಿ, ಯಲ್ಲಾಪುರ ಮಾರ್ಗದಲ್ಲಿ ಸಂಚಾರ ನಿಷೇಧ
  • ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಲಾರಿ ಹರಿದು 4ರ ಬಾಲಕಿ ದುರ್ಮರಣ
    ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಲಾರಿ ಹರಿದು 4ರ ಬಾಲಕಿ ದುರ್ಮರಣ
  • ಪ್ರಧಾನಮಂತ್ರಿ  ಅವರನ್ನು ಭೇಟಿ ಮಾಡಿದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಟ್ರಸ್ಟಿಗಳು
    ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಟ್ರಸ್ಟಿಗಳು
  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕತಾರ್ ಅಮೀರ್ ಗೌರವಾನ್ವಿತ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತುಕತೆ
    ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕತಾರ್ ಅಮೀರ್ ಗೌರವಾನ್ವಿತ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತುಕತೆ
  • ಶಿವಮೊಗ್ಗ ತ್ಯಾವರೆಕೊಪ್ಪ ಮೃಗಾಲಯದಲ್ಲಿ  ಚಿಕಿತ್ಸೆ ನೀಡುತ್ತಿದ್ದ ವೇಳೆ ನೀರಾನೆ ದಾಳಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಬಲಿ
    ಶಿವಮೊಗ್ಗ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಚಿಕಿತ್ಸೆ ನೀಡುತ್ತಿದ್ದ ವೇಳೆ ನೀರಾನೆ ದಾಳಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಬಲಿ
  • Home Delivery Death: ಮನೆಯಲ್ಲೇ 7ನೇ ಹೆರಿಗೆ, ತಾಯಿ ಸಾವು! ಅಕ್ಯುಪಂಕ್ಚರ್ ಚಿಕಿತ್ಸಕ ಪತಿ ವಿರುದ್ಧ ಕೇಸ್
    Home Delivery Death: ಮನೆಯಲ್ಲೇ 7ನೇ ಹೆರಿಗೆ, ತಾಯಿ ಸಾವು! ಅಕ್ಯುಪಂಕ್ಚರ್ ಚಿಕಿತ್ಸಕ ಪತಿ ವಿರುದ್ಧ ಕೇಸ್
  • ಪೊಲೀಸ್‌ ವಶದಲ್ಲಿದ್ದ ವ್ಯಕ್ತಿ ಸಾವು – ಗ್ರಾಮಸ್ಥರಿಂದ ಲಾಕಪ್‌ ಡೆತ್ ಆರೋಪ, ಠಾಣೆಗೆ ಬೀಗ ಜಡಿದು ಪ್ರತಿಭಟನೆ
    ಪೊಲೀಸ್‌ ವಶದಲ್ಲಿದ್ದ ವ್ಯಕ್ತಿ ಸಾವು – ಗ್ರಾಮಸ್ಥರಿಂದ ಲಾಕಪ್‌ ಡೆತ್ ಆರೋಪ, ಠಾಣೆಗೆ ಬೀಗ ಜಡಿದು ಪ್ರತಿಭಟನೆ
  • ಮಂತ್ರಾಲಯದಲ್ಲಿ ಯುಗಾದಿ ಸಂಭ್ರಮ – ಮೂಲ ರಾಮದೇವರಿಗೆ ತೈಲ ಅಭ್ಯಂಗನ
    ಮಂತ್ರಾಲಯದಲ್ಲಿ ಯುಗಾದಿ ಸಂಭ್ರಮ – ಮೂಲ ರಾಮದೇವರಿಗೆ ತೈಲ ಅಭ್ಯಂಗನ
  • ಅಯೋಧ್ಯೆ ರಾಮಮಂದಿರಕ್ಕೆ ದ್ರೌಪದಿ ಮುರ್ಮು ಭೇಟಿ – 150 ಕೆಜಿ ತೂಕದ ಚಿನ್ನ ಲೇಪಿತ ಲೋಹದ ತಟ್ಟೆ ಪ್ರತಿಷ್ಠಾಪನೆ
    ಅಯೋಧ್ಯೆ ರಾಮಮಂದಿರಕ್ಕೆ ದ್ರೌಪದಿ ಮುರ್ಮು ಭೇಟಿ – 150 ಕೆಜಿ ತೂಕದ ಚಿನ್ನ ಲೇಪಿತ ಲೋಹದ ತಟ್ಟೆ ಪ್ರತಿಷ್ಠಾಪನೆ

Designed by Elegant Themes | Powered by WordPress

error: Content is protected !!