ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) 2024-2025ರ ಶೈಕ್ಷಣಿಕ ವರ್ಷದಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ವಿಭಾಗದಲ್ಲಿ ಆರು ಶೈಕ್ಷಣಿಕ ಪದವಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)ಕ್ಕೆ ಅನುಮತಿ ನೀಡಿದೆ.
ಪ್ರತಿಯೊಂದು ಉಪ ವಿಭಾಗದಲ್ಲಿ ವಾರ್ಷಿಕ ಪ್ರವೇಶ 60 ಆಗಿದ್ದು, ಪ್ರವೇಶದ ಮೊದಲ ವರ್ಷದಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 360 ಆಗಿದೆ.
ಈ ಶೈಕ್ಷಣಿಕ ಪದವಿಗಳನ್ನು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ನೀಡಲಾಗುವುದು.
ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಅಧ್ಯಯನ ವಿಭಾಗವು ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದಲ್ಲಿ ಸ್ಥಾಪಿಸಲಾದ ಹನ್ನೆರಡನೆಯ ಅಧ್ಯಯನ ವಿಭಾಗವಾಗಿದೆ.
ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) NIRF ನಲ್ಲಿ 85 ನೇ ಸ್ಥಾನದಲ್ಲಿದ್ದು NAAC ನಿಂದ A+ ಮಾನ್ಯತೆ ಪಡೆದಿದೆ.
ಪ್ರಸ್ತುತ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದಲ್ಲಿ 16,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ.