ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ (Pavithra Gowda) ಇದೇ ಮಂಗಳವಾರ (ಜುಲೈ 22) ಸುಪ್ರೀಂ ಕೋರ್ಟ್‌ನಿಂದ ಹೊರಬೀಳಲಿರುವ ಬೇಲ್ ಕ್ಯಾನ್ಸಲ್ ಕುರಿತ ಆದೇಶದ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ನಡುವೆಯೇ ಪವಿತ್ರಾ ಇನ್ಸ್ಟಾಗ್ರಾಂನಲ್ಲಿ (Instagram) ಪ್ರೊಫೈಲ್ ಪಿಕ್ (Profile Photo) ಬದಲಾಯಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಬಹುದಿನಗಳ ಬಳಿಕ ಪವಿತ್ರಾ ಇದೀಗ ಪ್ರೊಫೈಲ್ ಪಿಕ್ ಬದಲಾಯಿಸಿದ್ದಾರೆ. ಇದರ ಮರ್ಮ ಏನೆಂಬುದೇ ತಿಳಿಯದಾಗಿದೆ. ಕಾರಣ ಬೇಲ್ ರದ್ದಾಗುವ ಆತಂಕವೂ ಇಲ್ಲದೆ ಆದೇಶದ ಮೇಲೆ ಅಷ್ಟೊಂದು ಕಾನ್ಫಿಡೆಂಟ್ ಆಗಿದ್ದಾರಾ ಅನ್ನೋದೇ ಚರ್ಚೆಯ ವಿಷಯವಾಗುತ್ತಿದೆ. ಇದನ್ನೂ ಓದಿ : ದಕ್ಷಿಣ ಕನ್ನಡದಲ್ಲಿ ಮಳೆ ಪೀಡಿತ ಪ್ರದೇಶದ 11 ಶಾಲೆಗಳ ದುರಸ್ತಿಗೆ ಕೇಂದ್ರ ಸರ್ಕಾರದ ಅನುಮೋದನೆ
ರೆಡ್‌ಕಾರ್ಪೆಟ್ ಒಡತಿ ಪವಿತ್ರಾ ಇಷ್ಟು ದಿನ ಬೇರೆಯದ್ದೇ ಪ್ರೊಫೈಲ್ ಪಿಕ್ ಹೊಂದಿದ್ದರು. ಇದೇ ಇನ್ಸ್ಟಾಗ್ರಾಂನಲ್ಲಿ ಫೋಟೋ, ವೀಡಿಯೋಗಳನ್ನ ಪೋಸ್ಟ್ ಮಾಡಿದ್ದಾಗ ಬಂದ ಕಾಮೆಂಟ್ಸ್, ಮೆಸೇಜ್‌ಗಳಿಂದಲೇ ಜೀವನದಲ್ಲಿ ಅವಾಂತರ ಸೃಷ್ಟಿಸಿಕೊಂಡ ಪವಿತ್ರಾ ಇದೀಗ ದೊಡ್ಡದೊಂದು ಸವಾಲು ಎದುರಾಗುವ ಮುನ್ನಾದಿನವೇ ಇನ್ಸ್ಟಾಗ್ರಾಂನಲ್ಲಿ ಫೋಟೋ ಬದಲಿಸಿರುವುದು ಆಶ್ಚರ್ಯಕ್ಕೀಡುಮಾಡುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಗುರುವಾರ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ.