ಬಂಟ್ವಾಳ: ಎಸ್ ವಿ ಎಸ್ ಶಾಲೆ ಬಂಟ್ವಾಳ ಇಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನದ ಶಝ ಪಾತಿಮಾ ಇವಳು ಪ್ರಥಮ ಸ್ಥಾನ ಪಡೆದು ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾಳೆ .  ಇದನ್ನೂ ಓದಿ : “ಸಹಕಾರ ರತ್ನ” ಪ್ರಶಸ್ತಿಗೆ ಭಾಜನರಾದ ಶ್ರೀ ಟಿ. ಜಿ. ರಾಜಾರಾಮ್ ಭಟ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಹಿಂದಿ ಭಾಷಣ ಸ್ಪರ್ಧೆಯಲ್ಲಿ ಫಾತಿಮಾ ಇವಳು ದ್ವಿತೀಯ ಸ್ಥಾನ ಪಡೆದು ಸರಕಾರಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾಳೆ .ಇವರಿಗೆ ಮುಖ್ಯಗುರುಗಳಾದ ಗೋಪಾಲಕೃಷ್ಣ ನೇರಳಕಟ್ಟೆ ಮತ್ತು ಭಾರತಿ ಕೈರಂಗಳ ತರಬೇತಿಯನ್ನು ಕೊಟ್ಟಿರುತ್ತಾರೆ . ಶಿಕ್ಷಕರಾದ ಅಬ್ದುಲ್ ರಫೀಕ್ , ಶರತ್ ಕುಮಾರ್ , ಕ್ಷಮಾ ಕುಮಾರಿ, ಶುಭ ,ಪವಿತ್ರ ಮತ್ತು ಅನಿಲ್ ರವರು ಸಹಕರಿಸಿರುತ್ತಾರೆ