ಮಂಗಳೂರು:  ಅಂಗಾಂಗ ದಾನದ ಕುರಿತು ಜಾಗೃತಿಯನ್ನು ಗಣನೀಯವಾಗಿ ಹೆಚ್ಚಿಸುವ ಸಲುವಾಗಿ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ರೆಡ್ ಕ್ರಾಸ್ ಹಾಗೂ ಯೆನೆಪೋಯ (ಡೀಮ್ಡ್ ಟು ಬಿ ಯುನಿರ‍್ಸಿಟಿ) ಮತ್ತು ಯೆನೆಪೋಯ ರ‍್ಸಿಂಗ್ ಕಾಲೇಜಿನ ಸಮುದಾಯ ಆರೋಗ್ಯ ರ‍್ಸಿಂಗ್ ವಿಭಾಗದ ಸಹಯೋಗದೊಂದಿಗೆ ಇಂದು ಜಿಲ್ಲಾ ಮಟ್ಟದ ಬೀದಿ ನಾಟಕ ಕಾರ್ಯಕ್ರಮವನ್ನು  ಯಶಸ್ವಿಯಾಗಿ ಆಯೋಜಿಸಲಾಯಿತು. ಇದನ್ನೂ ಓದಿ : ಆ.19 ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಅಂಗಾಂಗ ದಾನದ ಮಹತ್ವದ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದ ಈ ಕರ‍್ಯಕ್ರಮದಲ್ಲಿ ಜಿಲ್ಲೆಯಾದ್ಯಂತ 15 ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು. ಕರ‍್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ವೆಕ್ಟರ್ ಬರ‍್ನ್ ಡಿಸೀಸ್ ಕಂಟ್ರೋಲ್ ಆಫೀಸರ್ ಮತ್ತು ಜಿಲ್ಲಾ ನೋಡಲ್ ಆಫೀಸರ್ SOTTO ಆಗಿರುವ ಡಾ. ಜಸಿಂತಾ ಡಿ’ಸೋಜಾ ಉದ್ಘಾಟಿಸಿದರು.

ಬಳಿಕ ಮಾತನಾಡಿದ “ಅಂಗಾಂಗ ದಾನವು ಅಗಾಧವಾದ ಔದಾರ‍್ಯದ ಕರ‍್ಯವಾಗಿದ್ದು, ಅಸಂಖ್ಯಾತ ಜೀವಗಳನ್ನು ಪರಿವರ್ತಿಸುವ ಮತ್ತು ಉಳಿಸುವ ಶಕ್ತಿಯನ್ನು ಹೊಂದಿದೆ” ಎಂದರು.

ಯೆನೆಪೋಯ (ಡೀಮ್ಡ್ ಟು ಬಿ ಯುನಿರ‍್ಸಿಟಿ) ಯ ವಿಸ್ತರಣೆ ಮತ್ತು ಔಟ್ರೀಚ್ ಚಟುವಟಿಕೆಗಳ ನಿರ್ದೇಶಕರಾದ  ಡಾ. ಅಶ್ವಿನಿ ಶೆಟ್ಟಿ ಅವರು ಗೌರವ ಅತಿಥಿಯಾಗಿ ಮಾತನಾಡಿ, “ಅಸ್ತಿತ್ವದಲ್ಲಿರುವ ಮೂಢನಂಬಿಕೆ ಗಳನ್ನು ತಡೆಯಲು ಸಮುದಾಯದಲ್ಲಿ ಅಂಗಾಂಗ ದಾನದ ಅರಿವನ್ನು ಮೂಡಿಸುವುದು ಪ್ರಸ್ತುತ ಸನ್ನಿವೇಶದಲ್ಲಿ  ಅತ್ಯಮೂಲ್ಯವಾಗಿದೆ.

ಯೆನೆಪೋಯ ರ‍್ಸಿಂಗ್ ಕಾಲೇಜಿನ ಡೀನ್ ಡಾ. ಲೀನಾ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು. ಯೆನೆಪೋಯ (ಡೀಮ್ಡ್ ಟು ಬಿ ಯುನಿರ‍್ಸಿಟಿ) ಯ ಯುವ ರೆಡ್ ಕ್ರಾಸ್ನ ನೋಡಲ್ ಆಫೀಸರ್ ಶ್ರೀಮತಿ ನಿತ್ಯಶ್ರೀ ಬಿ.ವಿ. ಸ್ವಾಗತ ಭಾಷಣ ಮಾಡಿದರು, ಮತ್ತು ಯೆನೆಪೋಯ ರ‍್ಸಿಂಗ್ ಕಾಲೇಜಿನ ಕರ‍್ಯಕ್ರಮ ಅಧಿಕಾರಿ ಶ್ರೀಮತಿ ಜ್ಯೋತಿ ವಂದಿಸಿದರು. ಕಾರ್ಯಕ್ರಮವನ್ನು   ಶ್ರೀಮತಿ ಅದ್ರಿಜಾ ಮತ್ತು ಕುಮಾರಿ ಅಕ್ಷಿತಾ ನಿರೂಪಿಸಿದರು.

ಶ್ರೀಮತಿ ಫಾತಿಮಾತು ಝುಹ್ರಾ  ಪ್ರರ್ಥನೆ ಸಲ್ಲಿಸಿದರು. ಬೀದಿ ನಾಟಕದಲ್ಲಿ  ಅಲನ್ ಎಲ್ಧೋ ನೇತೃತ್ವದ ಕನಚೂರ್ ಕಾಲೇಜ್ ಆಫ್ ರ‍್ಸಿಂಗ್ ಸೈನ್ಸಸ್ ಮೊದಲ ಸ್ಥಾನ ಗಳಿಸಿತು, ಆರನ್ ಡಿ’ಸೋಜಾ ನೇತೃತ್ವದ ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ರ‍್ಸಿಂಗ್ ಎರಡನೇ ಸ್ಥಾನ ಪಡೆಯಿತು, ಮತ್ತು ಹಿಬಾ ಮೊಹಮ್ಮದ್ ಸಿ.ಪಿ. ನೇತೃತ್ವದ ಯೆನೆಪೋಯ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮೂರನೇ ಸ್ಥಾನವನ್ನು ಗಳಿಸಿತು.