ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆಯಲ್ಲಿ , ಒರಲ್ಪ್ಯಾತೊಲಾಜಿ ದಿನವನ್ನು,26 ನೆಫೆಬ್ರವರಿ 2024 ರಂದು ಒರಲ್ಪ್ಯಾತೊಲಾಜಿ ವಿಭಾಗದ ಮೂಲಕ ಆಚರಿಸಲಾಯಿತು. ಮುಖ್ಯಅತಿಥಿಯಾಗಿಡಾ. ಯು. ಎಸ್. ಕೃಷ್ಣನಾಯಕ್, ಪ್ರಾಂಶುಪಾಲರು ಹಾಗೂ ಡೀನ್, ಎ.ಬಿ. ಶೆಟ್ಟಿ ದಂತ ಕಾಲೇಜು ಮತ್ತು ಆಸ್ಪತ್ರೆ, ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಭಾಗವಹಿಸಿ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.
ಡಾ. ಮ್. ವಿಜಯಕುಮಾರ್, ಗೌರವನ್ವಿತಾಉಪಕುಲಪತಿಗಳು. ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ಗೌರವಅತಿಥಿಯಾಗಿ ಭಾಗವಹಿಸಿ ಬಾಯಿಯ ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ದಂತ ವೈದ್ಯರ ಮುಖ್ಯ ಪಾತ್ರ ಮತ್ತು ಪ್ರಾಥಮಿಕ ಹಂತದಲ್ಲಿ ಇದರ ಪತ್ತೆ ಹಚ್ಚುವಿಕೆಯ ಮಹತ್ವವನ್ನು ವಿವರಿಸಿದರು.
ಡಾ. ಲಕ್ಷ್ಮಿಕಾಂತ್ಚಾತ್ರ, ಪ್ರಾಂಶುಪಾಲರು, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಕಾರ್ಯಕ್ರಮವನ್ನುನಡೆಸಿಕೊಟ್ಟರು. ಡಾ. ಶಾಮ್ ಎಸ್ಭಟ್, ಡೀನ್, ಉಪಸ್ಥಿತರಿದ್ದರು.
ಒರಲ್ಪ್ಯಾತೊಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ರಿಯಾಜ್ ಅಬ್ದುಲ್ಲ ಎಲ್ಲರನ್ನು ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಮಾತನಾಡಿ ವಿಭಾಗದಲ್ಲಿ ಶೈಕ್ಷಣಿಕ, ಸಂಶೋಧನೆ ಹಾಗೂ ರೋಗಿಗಳ ಆರೈಕೆ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
ಅಲ್ಲದೆ ಒರಲ್ಪ್ಯಾತೊಲಾಜಿ ವಿಭಾಗಕ್ಕೆ ರಾಷ್ಟ್ರೀಯ ವಿಜ್ಞಾನ ದಿನ, ಫೆಬ್ರವರಿ 28, 2024 ರ ಕಾರ್ಯಕ್ರಮದಲ್ಲಿ ಉತ್ತಮ ದಂತ ವಿಭಾಗ ಪ್ರಶಸ್ತಿ ದೊರೆತ ಕುರಿತು ಸಂತಸಹಂಚಿಕೊಂಡರು. ಡಾ. ಇಮ್ರಾನ್ಮೋತಿಸಾಮ್ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.
ಡಾ. ಪಲ್ಲವಿ ಮತ್ತು ಡಾ. ಯುಗಷಿನ್ಕಾರ್ಯ ಕ್ರಮವನ್ನುಸಂಯೋಜಿಸಿದರು .ಡಾ. ವಿಷ್ಣುದಾಸ್ಪ್ರಭು ಕಾರ್ಯಕ್ರಮದಲ್ಲಿ ವಂದಿಸಿದರು.