ಗೃಹಲಕ್ಷ್ಮಿ ಹಣ ವಿಳಂಬದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗೃಹಲಕ್ಷ್ಮಿ ಹಣ ಬಿಡುಗಡೆಗೆ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ. ಏಪ್ರಿಲ್ ತಿಂಗಳವರೆಗೂ ಹಣ ಕ್ಲಿಯರ್ ಆಗಿದೆ. ಮೇತಿಂಗಳು ಮಾತ್ರ ಬಾಕಿ ಇದ್ದು ಪ್ರತಿ ತಿಂಗಳು ಹಣಕಾಸು ಇಲಾಖೆಗೆ ಹಣ ಬಿಡುಗಡೆ ಆಗುತ್ತಿದೆ ಎಂದರು.
ಈಗ ಹಣ ತಾಲೂಕು, ಜಿಲ್ಲಾ ಪಂಚಾಯತಿಗೆ ಸುತ್ತಾಡಿ ಬಿಡುಗಡೆ ಆಗಬೇಕಿದೆ. ಇದರಿಂದಾಗಿ ಒಂದು ವಾರ, ಎರಡು ವಾರ ತಡೆ ಆಗಬಹುದು ಅಷ್ಟೇ. ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 6ರ ಮಗು ಸಾವು?
ಹಣಕಾಸು ಇಲಾಖೆ ಪ್ರತಿ ತಿಂಗಳು ಹಣ ನೀಡುತ್ತಿದೆ. ಪ್ರತಿ ತಿಂಗಳು ಯಜಮಾನಿಯರು ಹೊಸದಾಗಿ ಸೇರುತ್ತಿದ್ದಾರೆ. ಈಗ 1.25 ಕೋಟಿ ಯಜಮಾನಿಯರು ಯೋಜನೆ ಅಡಿ ಇದ್ದಾರೆ. ನಮ್ಮ ಇಲಾಖೆಯಿಂದ ಫಲಾನುಭವಿಗಳ ಪರಿಷ್ಕರಣೆ ಮಾಡುವುದಿಲ್ಲ. ಈಗ ಹೇಗೆ ಇದೆಯೋ ಹಾಗೆಯೇ ಮುಂದುವರೆಯುತ್ತಿದೆ ಅಂತ ಸ್ಪಷ್ಟಪಡಿಸಿದರು.