ಫೆಬ್ರವರಿ 16 ರಂದು ನಡೆಯಲಿರುವ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಾಗೂ ಮುಂಬರುವ ವಿಧಾನ ಪರಿಷತ್ ಚುನಾವಣೆಗಳಿಗೆ ಸಂಬಂಧಿಸಿದಂತೆ ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಇಂದು ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾನ್ಯ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬಿ.ಜೆ.ಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತುಕತೆ ನಡೆಸಿದರು.

ಈ ನಿಟ್ಟಿನಲ್ಲಿ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಆಸ್ಪದ ಉಂಟಾಗದಂತೆ ಪರಿಷತ್ ಚುನಾವಣೆಗಳಲ್ಲಿ ಪರಸ್ಪರ ಒಮ್ಮತ ಹಾಗೂ ವಿಶ್ವಾಸದ ವಾತಾವರಣದಲ್ಲಿ ಚುನಾವಣೆ ಎದುರಿಸಲು ಆರೋಗ್ಯಕರ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ Basavaraj Bommai , ಶ್ರೀ Sadananda Gowda , ವಿರೋಧ ಪಕ್ಷ ನಾಯಕರಾದ ಶ್ರೀ R Ashoka , ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ Govind M Karjol , ಶ್ರೀ Dr. Ashwath Narayan , ಜೆಡಿಎಸ್ ಪಕ್ಷದ ನಾಯಕರುಗಳಾದ ಶ್ರೀ ಜಿ.ಟಿ ದೇವೇಗೌಡರು, ಶ್ರೀ ಬಂಡೆಪ್ಪ ಕಾಶಂಪೂರ್, ಶ್ರೀ ನಿಖಿಲ್ ಕುಮಾರಸ್ವಾಮಿ, MLC ಶ್ರೀ ಎಸ್.ಎಲ್ ಬೋಜೇಗೌಡರು, ಶ್ರೀ ಕೆ.ಎ ತಿಪ್ಪೇಸ್ವಾಮಿ ಅವರುಗಳು ಭಾಗವಹಿಸಿದ್ದರು.