ಮಂಗಳೂರು: ಮಂಗಳೂರಿನ ಕಡಲತೀರದಲ್ಲಿ ಮೊದಲಬಾರಿಗೆ ಆಲಿವ್ ರಿಡ್ಲೆ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿವೆ.
ಅರಣ್ಯ ಇಲಾಖೆ ಸಿಬಂದಿಗಳು ಸುರತ್ಕಲ್ ಆಸುಪಾಸಿನ ಕಡಲತೀರದ ಬಳಿಯ ಮೂರು ಕಡೆಗಳಲ್ಲಿ ಆಲಿವ್ ರಿಡ್ಲೆ ಆಮೆಗಳು ಬಂದು ಮೊಟ್ಟೆ ಇರಿಸಿ ಹೋಗಿರುವುದನ್ನು ಪತ್ತೆ ಮಾಡಿದ್ದು, ಸಂರಕ್ಷಣೆಗೂ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಹಿಂದೆ ಮಂಗಳೂರಿನ ಕಡಲತೀರದ ಎಲ್ಲಿಯೂ ಆಲಿವ್ ರಿಡ್ಲೆ ಮೊಟ್ಟೆಗಳು ಕಂಡುಬಂದಿಲ್ಲ. ಸಮುದ್ರ ತೀರದಲ್ಲಿ ಮಾನವ ಚಟುವಟಿಕೆ ಮೇಲೆ ನಿಯಂತ್ರಣವಿದ್ದ ಕಾರಣ ಸಮುದ್ರತೀರದಲ್ಲಿ ಆಲಿವ್ ರಿಡ್ಲೆ ಕಡಲಾಮೆ ಮೊಟ್ಟೆ ಇರಿಸಿದೆ ಎಂದು ಹೇಳಲಾಗಿದೆ.
ಅವುಗಳಲ್ಲಿ ಎರಡು ಕಡೆಗಳಲ್ಲಿ ಜೋರಾದ ಅಲೆಗಳು ಬಡಿಯುವ ಕಾರಣ ಅವುಗಳನ್ನು ಅಲ್ಲಿಂದ ಸುರಕ್ಷಿತ ಜಾಗಕ್ಕೆ ಅರಣ್ಯ ಇಲಾಖೆ ಸ್ಥಳಾಂತರಿಸಿದೆ.