ನವದಂಪತಿ ಸಮಾವೇಶ
ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ೨೪ನೇ ವರ್ಷದ ನವದಂಪತಿ ಸಮಾವೇಶ ಶ್ರೀರಾಮ ಪ್ರಾಥಮಿಕ ಶಾಲೆಯ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು. ನವದಂಪತಿಗಳ ಪಾದ ತೊಳೆದು ಸ್ವಾಗತಿಸಿ, ಅಗ್ನಿಕುಂಡಕ್ಕೆ, ಅರ್ಘ್ಯ ಅರ್ಪಿಸಿ ದಂಪತಿಗಳನ್ನು ವೇದಘೋಷದೊಂದಿಗೆ ವೇದವ್ಯಾಸ ಸಭಾಂಗಣಕ್ಕೆ ಕರೆದೊಯ್ಯಲಾಯಿತು. ಇದನ್ನೂ ಓದಿ : ವಿಶ್ವದಲ್ಲೇ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಣೆ – ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಯಶಸ್ವಿ ಕಾರ್ಯ
ಹಿರಿಯ ದಂಪತಿಗಳಾದ ಹಿಂದೂ ಜಾಗರಣ ವೇದಿಕೆಯ ಸುಳ್ಯ ಪ್ರಖಂಡದ ತಾಲೂಕು ಸಂಚಾಲಕರಾದ ಶ್ರೀಎನ್. ಎ ರಾಮಚಂದ್ರ ಮತ್ತು ಶ್ರೀಮತಿ ಡಾ|ಯಶೋಧ, ಪ್ರಭು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕ ಮಾಡಿ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು ಮತ್ತು ತಮ್ಮಜೀವನದ ಅನುಭವವನ್ನು ಹಂಚಿಕೊಂಡರು.
ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಮಾನನೀಯ ಡಾ|ಪ್ರಭಾಕರ್ ಭಟ್ ಕಲ್ಲಡ್ಕಅವರು ಹಿಂದೂ ಸಮಾಜದ ಬಗ್ಗೆ ತಿಳಿಸಿಕೊಟ್ಟರು.ಧರ್ಮ ಸಂಸ್ಕೃತಿ ಯ ಕೇಂದ್ರ ಬಿಂದು ನಮ್ಮ ಮನೆ ನಮ್ಮ ಕುಟುಂಬವನ್ನು ನಾವು ರಕ್ಷಣೆ ಮಾಡಬೇಕು. ಹಿಂದೂ ಸಮಾಜ ಉಳಿದಿರುವುದು ಪರಸ್ಪರ ತಿಳುವಳಿಕೆಯಿಂದ ಎಂದು ತಿಳಿಸಿದರು.
ನಂತರ ಗಜಾನನ ಪೈ ಅವರು ನಾವು ಧರ್ಮದ ರೀತಿಯಲ್ಲಿ ನಡೆಯುವಂತಹ ಪ್ರಜೆಗಳು ನಮ್ಮದು ಸನಾತನ ಸಂಸ್ಕತಿ ಪೀಳಿಗೆಯಿಂದ ಪೀಳಿಗೆಗೆ ನಡೆದುಕೊಂಡು ಬಂದಿದೆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಅದಕ್ಕೆ ಬೇಕಾದಂತಹ ಸಂಸ್ಕಾರ ಕೊಡಬೇಕು ಎಂದು ಮಾರ್ಗದರ್ಶನ ಮಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಶ್ರೀ ಸು.ರಾಮಣ್ಣನವರು ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನುರಕ್ಷಿಸುತ್ತದೆ,ಸಂಸಾರ ಪಥದಲ್ಲಿ ಸಾಗುವಾಗ ದಂಪತಿಗಳಲ್ಲಿ ತಾಳ್ಮೆ,ಹೊಂದಾಣಿಕೆ,ಪರಸ್ಪರ ಅರ್ಥೆÊಸಿಕೊಳ್ಳುವುದು ತುಂಬಾಅಗತ್ಯವೆಂದು ಮಾರ್ಗದರ್ಶನ ಮಾಡಿದರು.
ಕುಟುಂಬ ಪ್ರಭೋಧನ ಪ್ರಮುಖರಾದ ಗಜಾನನ ಪೈ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ಶ್ರೀ ವಸಂತ ಮಾಧವ, ಸಹಸಂಚಲಕರಾದ ರಮೇಶ್‌ಎನ್, ಡಾ|ಕಮಲಾ ಭಟ್ ಕಲ್ಲಡ್ಕಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು.
ಒಟ್ಟು ೯೭ ಜೋಡಿ ದಂಪತಿಗಳು ಭಾಗವಹಿಸಿದ್ದರು.ಶ್ರೀಮತಿ ಲಾವಣ್ಯ ಸ್ವಾಗತಿಸಿ, ಶ್ರೀಮತಿ ಗಾಯತ್ರಿ ಪ್ರಾರ್ಥಿಸಿ,ಶ್ರೀಮತಿ ಗುರುಪ್ರಿಯ ವೈಯಕ್ತಿಕಗೀತೆ ಹಾಡಿದರು.ಶ್ರೀಮತಿ ಮೇಘಶ್ರೀ ವಂದಿಸಿ,ಶ್ರೀಮತಿ ಚೈತ್ರಾ ನಿರೂಪಿಸಿದರು.
