ತುಮಕೂರಿನ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ‘ಸೈಬರ್ ಸೆಕ್ಯೂರಿಟಿ ಸಂಶೋಧನಾ ಘಟಕ’ವನ್ನು  ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಅವರು  ಉದ್ಘಾಟಿಸಿದರು.

ಸೈಬರ್ ಸೆಕ್ಯೂರಿಟಿ ಸಂಶೋಧನಾ ಘಟಕ

ಬಳಿಕ ಮಾತನಾಡಿ ಸೈಬರ್ ಸೆಕ್ಯೂರಿಟಿ ವಿಷಯದ ಬಗ್ಗೆ ಸಂಶೋಧನಾತ್ಮಕವಾಗಿ ಅಧ್ಯಯನ‌ ನಡೆಸಲು, ಸ್ಥಳೀಯವಾಗಿ ಎದುರಾಗುವ ಸೈಬರ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಲಿದೆ.‌ ಸೈಬರ್ ಹಾವಳಿಯನ್ನು ತಡೆಗಟ್ಟಲು ಅನೇಕ ರೀತಿಯಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಮುಂಬರುವ ವಿದ್ಯಾರ್ಥಿಗಳಿಗೆ ತಾಂತ್ರಿಕವಾಗಿ ಕಲಿಯಲು ಸಂಶೋಧನಾ ಕೇಂದ್ರ ಸಹಾಯಕವಾಗಲಿದೆ ಎಂದರು. ಇದನ್ನೂ ಓದಿ : ನವದೆಹಲಿಯಲ್ಲಿ ಸಂಸದರಿಗಾಗಿ ಹೊಸದಾಗಿ ನಿರ್ಮಿಸಲಾದ ವಸತಿ ಸಮುಚ್ಚಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಫ್ಲೋರಿಡಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್.ಎಸ್.ಅಯ್ಯಂಗಾರ್, ಸಾಹೇ ವಿವಿ ಉಪಕುಲಪತಿ ಡಾ. ಕೆ.ಬಿ.ಲಿಂಗೇಗೌಡ, ಕುಲಸಚಿವ ಡಾ. ಅಶೋಕ್‌ ಮೆಹ್ತಾ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ.ಎಸ್.ರವಿಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.ಇದನ್ನೂ ಓದಿ :  ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ