ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಇದರ ವಾರ್ಷಿಕ ಹಬ್ಬ ಕಾರ್ಯಕ್ರಮವು ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಜರಗಿತು.
ಊರ ಹಿರಿಯರು, ಶಾಲೆಯ ಹಿತಚಿಂತಕರೂ ಆದ ರಾಮಚಂದ್ರ ಬನ್ನಿಂತಾಯರು ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಅವರು ಮಕ್ಕಳೇ ರಚಿಸಿದ ‘ಪಲ್ಲಕ್ಕಿ’ ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿದ್ಯಾ ಕುಮಾರಿ, ಶಿಕ್ಷಣ ಸಂಯೋಜಕರಾದ ಸುಜಾತ, ಸುಧಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗರತ್ನ, ಕಲ್ಲಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ. ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯರಾದ ಸವಿತಾ, ಹರಿಣಾಕ್ಷಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ ಕುಲಾಲ್, ಉಪಾಧ್ಯಕ್ಷೆ ಭವ್ಯ ಕಲ್ಲಗುಡ್ಡೆ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಲತ ಬಿ ಸ್ವಾಗತಿಸಿ, ಶಿಕ್ಷಕಿ ಇಂದಿರ ವಂದಿಸಿದರು ಶಾಲಾ ಶಿಕ್ಷಕರಾದ ಮಹಮ್ಮದ್ ಅಖೀಲ್, ಶಿಕ್ಷಕಿಯರಾದ ನಿಶ್ಮಿತಾ, ಅಶ್ವಿನಿ ಬಹುಮಾನ ಪಟ್ಟಿ ವಾಚಿಸಿದರು. ಶಾಲೆಯ ಹಿರಿಯ ಶಿಕ್ಷಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.ನಂತರ ವಿದ್ಯಾರ್ಥಿಗಳು ರಸಮಂಜರಿ ಕಾರ್ಯಕ್ರಮದಲ್ಲಿ ಹಾಡುಗಳನ್ನು ಹಾಡಿ ಸೇರಿದ ಸಭಿಕರ ಮನರಂಜಿಸಿದರು. ಸಂಜೆ ನೆಟ್ಲ ಹಾಗೂ ಬೊಮ್ಮನಕೋಡಿ ಅಂಗನವಾಡಿ ಮಕ್ಕಳ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾದವು.ನೆಟ್ಲ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರ ಸಮ್ಮಿಲನದೊಂದಿಗೆ ಪ್ರಸ್ತುತಿಯಾದ ನೃತ್ಯ ನಾಟಕದ ಜುಗಲ್‌ಬಂದಿ ‘ಮಕ್ಕಳ ಸ್ವರ್ಗ’ ಎಂಬ ವಿಶೇಷ ಕಾರ್ಯಕ್ರಮವು ನೆರೆದವರ ಮನಸೂರೆಗೊಂಡಿತು.
ಶಾಲೆಯ ಹಿರಿಯ ವಿದ್ಯಾರ್ಥಿಗಳೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ರಂಜಿಸಿದರು. ಈ ಸಮಯದಲ್ಲಿ, ಶಾಲೆಯಲ್ಲಿ ವರ್ಷಪೂರ್ತಿ ನಡೆದ ಕಾರ್ಯಕ್ರಮಗಳ ದೃಶ್ಯ ವರದಿಯನ್ನು ಪ್ರದರ್ಶಿಸಲಾಯಿತು.
ರಾತ್ರಿ ನಡೆದ ಸಭಾಕಾರ್ಯಕ್ರಮ ಸಂದರ್ಭದಲ್ಲಿ ಕಬಡ್ಡಿಯಲ್ಲಿ ರಾಷ್ಟಮಟ್ಟದಲ್ಲಿ ಸಾಧನೆಗೈದ ಹಿರಿಯ ವಿದ್ಯಾರ್ಥಿಗಳನ್ನು ಹಾಗೂ ಕಲಿಕೆಯಲ್ಲಿ ಸಾಧನೆಗೈದ ಹಿರಿಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲೆಗೆ ವಿವಿಧ ರೀತಿಯಲ್ಲಿ ಸಹಕಾರವಿತ್ತ ದಾನಿಗಳನ್ನು ಸನ್ಮಾನಿಸಲಾಯಿತು. ಪ್ರತಿಭಾಕಾರಂಜಿಯಲ್ಲಿ ಮಿಂಚಿದ ವಿದ್ಯಾರ್ಥಿಗಳನ್ನು, ಶಾಲೆಯ ಸ್ಪರ್ಥೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನೂ, ಪೋಷಕರನ್ನೂ ಬಹುಮಾನವಿತ್ತು ಅಭಿನಂದಿಸಲಾಯಿತು.
ಸಭೆಯ ಅಧ್ಯಕ್ಷ ಸ್ಥಾನ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಭಾಸ್ಕರ್ ಕುಲಾಲ್ ಅವರು ಈ ಶೈಕ್ಷಣಿಕ ವರ್ಷದಿಂದ ನೆಟ್ಲ ಶಾಲೆಯಲ್ಲಿ ಎಲ್.ಕೆ.ಜಿ. ಯು.ಕೆ.ಜಿ. ಆರಂಭವಾಗುವುದನ್ನು ಘೋಷಿಸಿದರು ಮತ್ತು ಸರ್ವರ ಸಹಕಾರಕ್ಕಾಗಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕೆ ಪದ್ಮನಾಭ ಕೊಟ್ಟಾರಿ ಮಾಜಿ ಶಾಸಕರು ವಿಟ್ಲ ವಿಧಾನಸಭಾ ಕ್ಷೇತ್ರ, ಯತಿನ್ ಕುಮಾರ್ ಏಳ್ತಿಮಾರ್, ಹರಿಕೃಷ್ಣ ಬಿ ಎಸ್ ಬರಿಮಾರು, ಹಿರಿಯ ವಿದ್ಯಾರ್ಥಿಗಳಾದ ಮಹಾಬಲ ಗೌಡ ಚನಿಲ, ವಲೇರಿಯನ್ ಅಲ್ಮೇಡಾ, ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯರಾದ, ಸವಿತಾ, ದೀಪಕ್, ಅಭಿಷೇಕ್ ಎನ್, ಪುಷ್ಪಲತಾ ಶೇಖರ್ ಪೂಜಾರಿ ಬೆಂಗಳೂರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾಲತ ಬಿ ಸ್ವಾಗತಿಸಿ, ಶಾಲೆಯ ಹಿರಿಯ ವಿದ್ಯಾರ್ಥಿ ಮನೋಜ್ ಕುಮಾರ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ನಂತರ ಕುಸಲ್ದ ಕಲಾವಿದೆರ್ ಬೆದ್ರ ಅವರ ‘ನಾಲಾಯಿ ಮಗುರುಜಿ’ ಎಂಬ ನಾಟಕ ಪ್ರದರ್ಶನ ನಡೆಯಿತು. ಶಾಲಾ ವಾರ್ಷಿಕ ಹಬ್ಬದ ನಿಮಿತಾ ಶಾಲೆಯನ್ನು ಊರ ಜಾತ್ರೆ ಯಂತೆ ಅಲಂಕರಿಸಲಾಗಿತ್ತು ಸಾರ್ವಜನಿಕ ಅನ್ನದಾನ ಏರ್ಪಡಿಸಲಾಗಿತ್ತು.