ಬಂಟ್ವಾಳ : ನೆರಂಬೋಳು ಶ್ರೀ ರಕ್ತೇಶ್ವರೀ ಯುವಕ ಸಂಘ ಮತ್ತು ದರ್ಬೆ ಯಕ್ಷಕಾವ್ಯ ತರಂಗಿಣಿ ಜಂಟಿ ಆಶ್ರಯದಲ್ಲಿ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ ಬಣ್ಣಗಾರಿಕಾ ಶಿಬಿರ ನ.೧೯ ರಂದು ನೆರಂಬೋಳು ಸಂಘದ ಸಬಾಭವನದಲ್ಲಿ ನಡೆಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಸಂಘಟಕ ಮತ್ತು ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಸಭಾಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಪ್ರಸಾಧನ ಕಲಾವಿದ ಪ್ರಭಾಕರ ಶೆಟ್ಟಿ ತೆಂಕಕಾರAದೂರು ಅವರನ್ನು ಸಮ್ಮಾನಿಸಲಾಯಿತು. ಬಳಿಕ ಬಣ್ಣಗಾರಿಕೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ಮಕ್ಕಳಿಗೆ ಬಣ್ಣ ಹಚ್ಚುವುದು ಮತ್ತು ಯಕ್ಷಗಾನದಲ್ಲಿ ಬಣ್ಣದ ಪಾತ್ರ ಬಗ್ಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ ದರ್ಬೆ ಯಕ್ಷಕಾವ್ಯ ತರಂಗಿನಿ ಮತ್ತು ಮಂಗಳೂರು ಶ್ರೀ ನಾಗಬ್ರಹ್ಮ ಮಹಮ್ಮಾಯಿ ತಂಡದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಲ್ಲಾ ಮಕ್ಕಳಿಗೆ ಯಕ್ಷಗಾನ ಸಂಬAಧಿಸಿದ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಿದರು.
ಮಾರ್ಗದರ್ಶಕರಾದ ಸಂಜೀವ ಕಜೆಪದವು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ರವಿ ನೆರಂಬೋಳು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.