ಬಂಟ್ವಾಳ ತಾಲೂಕು ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆಯ ಪ್ರಯುಕ್ತ ಜ.23 ರಂದು ಸಂಜೆ ಅಂಕದ ಚೆಂಡು,
ಕೊಡಮಣಿತ್ತಾಯ ಬ್ರಹ್ಮಬೈದರ್ಕಳುಗಳಿಗೆ ಗ್ರಾಮ ಸಂಕ್ರಾಂತಿ ಸೇವೆ, ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಪಂಚಾಮೃತ ಅಭಿಷೇಕ, ರಾತ್ರಿ ಕೊಡಮಣಿತ್ತಾಯ ದೈವಕ್ಕೆ ನೇಮೋತ್ಸವ, ಬ್ರಹ್ಮಬಲಿ, ಇರುಳು ದೈವಗಳಿಗೆ ನೇಮ ನಡೆಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಭರತ್ ಕುಮಾರ್ ರೈ ಪೀರ್ದಬೆಟ್ಟುಗುತ್ತು, ಶ್ರೀಮತಿ ಸುರೇಖಾ ಸುರೇಂದ್ರ ಆರಿಗ ಪಂಜಿಕಲ್ಲುಗುತ್ತು ಮಾಗಣೆ, ರಘುಚಂದ್ರ ಚೌಟ ಬಾಲೇಶ್ವರಗುತ್ತು,
ಕೋಟಿ ಪೂಜಾರಿ ಕೇಲ್ದೋಡಿಗುತ್ತು , ಜೇರ್ಣೋದ್ಧಾರ ಸಮಿತಿ ಸದಸ್ಯರು, ಗರಡಿ ಸೇವಾ ಸಮಿತಿ ಸದಸ್ಯರು, ಗರಡಿ ಫ್ರೆಂಡ್ಸ್ ಕ್ಲಬ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಚಿತ್ರಾ: ಗಣೇಶ್ ವಿ.ಕೊಟ್ಯಾನ್ ಐಸ್ರಗೋಳಿ