ನವದೆಹಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲಬಿಚ್ಚಿದ್ದು, ಹಿಂದೂಗಳ ನರಮೇಧವಾಗಿದೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ ಕಣಿವೆಯಲ್ಲಿ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿ 30ಕ್ಕೂ ಪ್ರವಾಸಿಗರನ್ನು ಕೊಂದು ರಕ್ತದ ಕೋಡಿ ಹರಿಸಿದ್ದಾರೆ. ಇನ್ನು ಉಗ್ರರ ಗುಂಡಿನ ದಾಳಿಗೆ ವಾರದ ಹಿಂದೆಯಷ್ಟೇ ಬಲಿಯಾಗಿದ್ದ ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ.

ಲೆಫ್ಟಿನೆಂಟ್ ವಿನಯ್ ನರ್ವಾಲ್ (26) ದಾಳಿಯಲ್ಲಿ ಮೃತಪಟ್ಟ ಅಧಿಕಾರಿ. ಹರಿಯಾಣ ಮೂಲದ ನರ್ವಾಲ್‌ ಇದೇ ಏಪ್ರಿಲ್‌ 16ರಂದು ಮದುವೆಯಾಗಿದ್ದರು. ಕೊಚ್ಚಿಯಲ್ಲಿ ಹೊಸದಾಗಿ ನೇಮಕಗೊಂಡಿದ್ದ ನೌಕಾಪಡೆಯ ನರ್ವಾಲ್‌ ರಜೆಯ ಮೇಲೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಲ್ಲಿರುವಾಗಲೇ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

ಗುಪ್ತಚರ ಇಲಾಖೆ ಅಧಿಕಾರಿ ಸಾವು:
ಅಲ್ಲದೇ ಉಗ್ರರ ದಾಳಿಗೆ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಬಿಹಾರ ಮೂಲದ ರಂಜನ್ ಅವರು ತಮ್ಮ ಪತ್ನಿ, ಮಗು ಕಣ್ಣಮುಂದೆಯೇ ಗುಂಡಿಗೆ ಬಲಿಯಾಘಿದ್ದಾರೆ. ಬಿಹಾರ ಮೂಲದ ಮನೀಶ್‌ ರಂಜನ್‌ ತೆಲಂಗಾಣ ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೆಲಸಕ್ಕೆ ರಜೆ ಹಾಕಿ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಕುಟುಂಬದೊಂದಿಗೆ ಸಂತಸದಿಂದ ಕಾಲ ಕಳೆಯುವಾಗಲೇ ರಕ್ಕಸರ ದಾಳಿಗೆ ಬಲಿಯಾಗಿದ್ದಾರೆ. ಅವರ ಪತ್ನಿ ಮತ್ತು ಮಗು ಸುರಕ್ಷಿತವಾಗಿದ್ದಾರೆ.