ನಮ್ಮ ಚರ್ಮದ ಮೃದುತ್ವವನ್ನು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು, ಬದಲಾದ ಚರ್ಮದ ಆರೋಗ್ಯವನ್ನು ರಕ್ಷಿಸಲು ಐಸ್ ಕ್ಯೂಬ್ ಹೇಗೆ ತಯಾರಿಸಿಕೊಳ್ಖುವುದು ನೋಡೋಣ ಬನ್ನಿ
ಅಲೋವೆರಾ ಐಸ್ ಕ್ಯೂಬ್
ಮಾಡುವ ವಿಧಾನ : ಶುದ್ಧ ಅಲೋವೆರಾ ಜೆಲ್ ತೆಗೆದು ಐಸ್ ಟ್ರೇಯಲ್ಲಿ ಹಾಕಿ ಗಟ್ಟಿ ಆಗುವವರೆಗೆ ಫ್ರೀಜ್ ಮಾಡಿ. ಬಿಸಿಲಿನಿಂದ ಒಣಗಿದ ಅಥವಾ ಕಿರಿಕಿರಿಗೊಂಡ ಚರ್ಮದ ಮೇಲೆ ನಯವಾಗಿ ಉಜ್ಜಿಕೊಳ್ಳಿ ಆರೋಗ್ಯವಾದ ಚರ್ಮ ನಿಮ್ಮದಾಗಿಸಿ.

ಜ್ಯೂಸ್ ಐಸ್ ಕ್ಯೂಬ್
ಕಿತ್ತಳೆ, ಕ್ರ್ಯಾನ್‌ಬೆರಿ ಅಥವಾ ದಾಳಿಂಬೆ ರಸವನ್ನು ಘನಗಳಾಗಿ ಫ್ರೀಜ್ ಮಾಡಿ. ಅವು ಹೊಳೆಯುವ ನೀರನ್ನು ತಣ್ಣಗಾಗಿಸಲು ಮತ್ತು ಸವಿಯಲು ಅಥವಾ ಸ್ಮೂಥಿಗಳಿಗೆ ರುಚಿ ಸೇರಿಸಲು ಒಂದು ಉತ್ತಮ ಮಾರ್ಗವಾಗಿದೆ.

ಗ್ರೀನ್ ಟೀ ಐಸ್ ಕ್ಯೂಬ್
ಒಂದು ಸ್ಟೀಲ್ ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಒಂದು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಿ, ಗ್ರೀನ್ ಟೀ ಬ್ಯಾಗ್ ಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಗ್ರೀನ್ ಟೀ ತಯಾರಿಸಿಕೊಳ್ಳಿ ಐಸ್ ಕ್ಯೂಬ್ ಟ್ರೇ ತೆಗೆದುಕೊಂಡು ಅದರಲ್ಲಿ ಗ್ರೀನ್ ಟೀ ಸುರಿದುಕೊಳ್ಳಿ ನಿಮ್ಮ ರೆಫ್ರಿಜರೇಟರ್ ನ ಡೀಪ್ ಫ್ರೀಜರ್ ನಲ್ಲಿ ಐಸ್ ಟ್ರೇ ಇಡಿ ಸುಮಾರು ಒಂದು ಗಂಟೆಯ ಬಳಿಕ ಘನ ರೂಪ ತಾಳಿದ ಗ್ರೀನ್ ಟೀ ಐಸ್ ಕ್ಯೂಬ್ ತೆಗೆದುಕೊಂಡು ನಿಮ್ಮ ಕಣ್ಣುಗಳ ಸುತ್ತ ನಯವಾಗಿ ಮಸಾಜ್ ಮಾಡಿ.

ಮೊಡವೆಗಳಿಗೆ ದಾಲ್ಚಿನ್ನಿ ಐಸ್ ಕ್ಯೂಬ್
ಒಂದು ಬಟ್ಟಲಿನಲ್ಲಿ ದಾಲ್ಚಿನ್ನಿ ಪುಡಿ ಅಥವಾ ದಾಲ್ಚಿನ್ನಿ ಎಸೆನ್ಶಿಯಲ್ ಆಯಿಲ್ ಮತ್ತು ರೋಜ್ ಹಿಪ್ ಆಯಿಲ್ ತೆಗೆದುಕೊಳ್ಳಿ. ಈ ಮಿಶ್ರಣಕ್ಕೆ ನೀರನ್ನು ಹಾಕಿ ಚೆನ್ನಾಗಿ ಕಲಸಿ, ಐಸ್ ಟ್ರೇಗೆ ಈ ಮಿಶ್ರಣವನ್ನು ಸುರಿದು ರೆಫ್ರಿಜರೇಟರ್ ನಲ್ಲಿ ನಾಲ್ಕರಿಂದ ಐದು ಗಂಟೆಗಳ ಕಾಲ ಫ್ರೀಜ್ ಮಾಡಿ. ವಾರದಲ್ಲಿ ಮೂರು ದಿನಗಳ ಕಾಲ ದಾಲ್ಚಿನ್ನಿ ಐಸ್ ಕ್ಯೂಬ್ ನಿಂದ ಮೊಡವೆಗಳಿರುವ ಜಾಗಕ್ಕೆ ಮೇಲೆ ಚೆನ್ನಾಗಿ ಹಚ್ಚಿ ಕೇವಲ ಕೆಲವೇ ವಾರಗಳಲ್ಲಿ ಒಳ್ಳೆಯ ಬದಲಾವಣೆ ನಿಮ್ಮಲ್ಲಿ ಕಾಣುತ್ತದೆ