ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದ ವ್ಯಾಸ ಧ್ಯಾನ ಮಂದಿರದಲ್ಲಿ ಸರ್.ಸಿ.ವಿ. ರಾಮನ್‌ರವರ ‘ರಾಮನ್ ಪರಿಣಾಮ’ ಆವಿಷ್ಕಾರದ ಸ್ಮರಣಾರ್ಥವಾಗಿ ಆಚರಿಸುವ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಮತ್ತು ‘ಜ್ಞಾನಧಾರ’ ವೈವಿಧ್ಯಮಯ ವಿಜ್ಞಾನ ಪ್ರದರ್ಶನಕಾರ್ಯಕ್ರಮ ನಡೆಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷ ಡಾ| ಪ್ರಭಾಕರ ಭಟ್‌ಕಲ್ಲಡ್ಕ ಅವರು ಮಾತನಾಡಿ“ವಿಜ್ಞಾನ ಜೀವನದ ಒಂದು ಭಾಗ. ವಿಜ್ಞಾನ ದೇಹದ ಒಳಗೂ ಇದೆ ಹೊರಗೂ ಇದೆ. ಮಿಕ್ಸಿ ಹೇಗೆ ರುಬ್ಬುವ ಕೆಲಸ ಮಾಡುತ್ತದೆಯೋ ಅದೇ ರೀತಿ ಜೀರ್ಣಕ್ರಿಯೆಯು ದೇಹದ ಒಳಗೆ ನಡೆಯುತ್ತದೆ. ದೇಹಕ್ಕೆ ಬೇಕಾದ ಸತ್ವವನ್ನು ತೆಗೆದುಕೊಂಡು ಬೇಡದ ವಸ್ತುವನ್ನು ಹೊರಗೆ ಹಾಕುತ್ತದೆ. ವಿಜ್ಞಾನಕ್ಕೆ ಭಾರತೀಯರ ಕೊಡುಗೆ ಅಪಾರ ಎಂದರು.
ಮೆರಿಟ್ ಪ್ರಶಸ್ತಿಗೆ ಭಾಜನರಾದ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಪ್ರಧಾನ ಕಛೇರಿಯಾದ ಅಂತರಿಕ್ಷ ಭವನದ ಸಿವಿಲ್ ಇಂಜಿನಿಯರಿಂಗ್ ಪ್ರೋಗ್ರಾಮ್ ಕಛೇರಿಯ ಎ.ಸಿ. ವಿಭಾಗದಲ್ಲಿ ಹವಾನಿಯಂತ್ರಕದ ವಿನ್ಯಾಸ, ಯೋಜನೆ ಮತ್ತು ಎಸಿಯ ಯಾಂತ್ರಿಕ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಗಣೇಶ್ ಬೆಂಗಳೂರು ಹಾಗೂ ನಯನಾ ಗಣೇಶ್, ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕೃತ ರಾಮ್‌ಕಿಶೋರ್ ಕೆ.ಮಂಚಿ ಹಾಗೂ ಕೆ.ಜಿ. ಚಂದ್ರಶೇಖರ ಗಿರಿನಿವಾಸ ಅವರಿಗೆ ಶಾಲಾ ಸಂಸ್ಥಾಪಕರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರರೈತ ಪ್ರಶಸ್ತಿ ಪುರಸ್ಕೃತ ರಾಮ್‌ಕಿಶೋರ್ ಕೆ.ಮಂಚಿ ಮಾತನಾಡಿ, “ಕೃಷಿ ಕೂಡ ಒಂದು ವಿಜ್ಞಾನ. ಕೃಷಿಯಲ್ಲಿ ಆಸಕ್ತಿ ಉಂಟಾಗಬೇಕು ಎನ್ನುವಉದ್ದೇಶದಿಂದ ಪ್ರತಿ ವಿಜ್ಞಾನ ದಿನಾಚರಣೆಗೆ ಕೃಷಿಕರನ್ನುಆಹ್ವಾನಿಸುವ ಕಾರ್ಯವನ್ನು ಶ್ರೀರಾಮ ಶಾಲೆ ಹಮ್ಮಿಕೊಳ್ಳುತ್ತಾ ಬಂದಿದೆ. ಇಲ್ಲಿ ಸಿಗುವಂತಹ ಅವಕಾಶಗಳನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಿ.”ಎಂದರು.
ನಂತರವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ-ಗಣಿತ ಮಾದರಿ ಪ್ರದರ್ಶನಕ್ಕೆ ನಿವೃತ್ತಇಸ್ರೊ ವಿಜ್ಞಾನಿ ಗಣೇಶ್ ಬೆಂಗಳೂರು ರಾಕೆಟ್‌ಉಡಾವಣೆಯ ಮೂಲಕ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳಿಂದ ವಿವರಣೆಗಳನ್ನು ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಔಷಧೀಯ ಸಸ್ಯಗಳ ಪ್ರದರ್ಶನ, ವನಫಲಗಳು(ಕಾಡಿನ ಹಣ್ಣುಗಳು), ತರಕಾರಿ ಗಿಡಗಳ ವಿಶೇಷ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಇಸ್ರೊ ವಿಜ್ಞಾನಿ ಗಣೇಶ್ ಬೆಂಗಳೂರು ಹಾಗೂ ಸಹಧರ್ಮಿಣಿ ನಯನಾಗಣೇಶ್, ವ್ಯವಸ್ಥಾಪಕ ಪ್ರಕಾಶ್ ಪಿ, ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರರೈತ ಪ್ರಶಸ್ತಿ ಪುರಸ್ಕೃತ ಕೆ.ಜಿ. ಚಂದ್ರಶೇಖರ ಗಿರಿನಿವಾಸ, ಅಟಲ್ ಟಿಂಕರಿಂಗ್ ಲ್ಯಾಬ್ ಸಂಯೋಜಕಿ ಶ್ರೀನಿಜ, ತಾಲೂಕು ಪಂಚಾಯತ್ ಉದ್ಯೋಗಿ ಅಶೋಕ್ ಬರಿಮಾರು, ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್‌ಎನ್, ಹಾಗೂ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಅಧ್ಯಾಪಕರಾದ ಅಕ್ಷತಾ ಬಹುಮಾನ ವಾಚಿಸಿದರು. ಕಾರ್ಯಕ್ರಮವನ್ನುವಿದ್ಯಾರ್ಥಿನಿಯರಾದ ಚಿನ್ಮಯಿ ಎಸ್. ಶೆಟ್ಟಿ ನಿರೂಪಿಸಿ, ಪಿ.ಸುಶ್ಮಿತಾ ಭಟ್‌ಸ್ವಾಗತಿಸಿ, ಪ್ರಾಪ್ತಿ ವಂದಿಸಿದರು.