ನರಿಂಗಾನ : ೧೦ನೇ ರಾಷ್ಟ್ರೀ ಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಯೆನೆಪೋಯ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ, ನರಿಂಗಾನ (ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆ) ವತಿಯಿಂದ ಸಾರ್ವಜನಿಕರಿಗಾಗಿ ಆರೋಗ್ಯ ಮಾಹಿತಿ ಶಿಬಿರ ಮತ್ತು ವಿದ್ಯಾರ್ಥಿಗಳಿಗಾಗಿ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಡಾ. ಜಯಗೋವಿಂದ ಉಕ್ಕಿನಡ್ಕ, ಸಹರಕ್ಷ ವಿದ್ಯಶಾಲ, ಉಕ್ಕಿನಡ್ಕಅವರಿಂದ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಉಪನ್ಯಾಸ ಕಾರ್ಯಕ್ರಮ ನಡೆದವು.  ಇದನ್ನೂ ಓದಿ : ಸ್ಕೌಟ್ ಗೈಡ್ ವಾರ್ಷಿಕ ವಿಶೇಷ ಶಿಬಿರ

ನಾಡಿನ ಶ್ರೇಷ್ಠ ಆಯುರ್ವೇದ ವೈದ್ಯರಿಗೆ ವರ್ಷಂಪ್ರತಿ ನೀಡಲಾಗುತ್ತಿರುವ ಯೆನ್ ಆಯು ವೈದ್ಯರತ್ನ ಪ್ರಶಸ್ತಿಯನ್ನು ೨೦೨೫ನೇ ಸಾಲಿನಲ್ಲಿ ಡಾ.ಕೆ.ಮೊಹಮ್ಮದ್ ಇಕ್ಬಾಲ್, ಜಿಲ್ಲಾ ಆಯುಷ್ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಅವರನ್ನು ಆಯ್ಕೆ ಮಾಡಲಾಗಿದೆ.

ಡಾ.ಕೆ.ಮೊಹಮ್ಮದ್ ಇಕ್ಬಾಲ್‌ರವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಆಯುಷ್ ಅಧಿಕಾರಿಯಾಗಿದ್ದು, ಕ್ಷೇತ್ರದಲ್ಲಿ ನಿಪುಣ, ಚತುರ ಆಡಳಿತಗಾರರಾಗಿ ತಮ್ಮ ತ್ಯಾಗ, ನಿಸ್ವಾರ್ಥ ಸೇವೆ, ಕ್ರಾಂತಿಕಾರಕ ಕಾರ್ಯ ಹಾಗೂ ಅದ್ಭುತ ಸಾಧನೆಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಹೆಮ್ಮೆಯ ವ್ಯಕ್ತಿತ್ವವಾಗಿ ಆಯುಷ್ ಪರಂಪರೆಯನ್ನು ವಿಶ್ವ ಮಟ್ಟದಲ್ಲಿ ಕೊಂಡೊಯ್ದಿರುತ್ತಾರೆ. ಇವರ ಈ ಸೇವೆಯನ್ನು ಪರಿಗಣಿಸಿ ದಿನಾಂಕ ೨೩.೦೯.೨೦೨೫ ರಂದು ೧೦ನೇ ರಾಷ್ಟ್ರೀ ಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಯೆನೆಪೋಯ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ನರಿಂಗಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನವನ್ನು ನಡೆಸಲಾಗುವುದು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಸಹ ಉಪಕುಲಪತಿಗಳಾದ ಡಾ.ಬಿ.ಹೆಚ್ ಶ್ರೀಪತಿ ರಾವ್‌ರವರು, ಹಾಗೂ ಡಾ.ಸುನೀತ ಸಲ್ಡಾನ್ಹ, ಪ್ರಾಂಶುಪಾಲರು, ಯೆನೆಪೋಯ ಅಲೈಡ್ ಹೆಲ್ತ್ ಎಂಡ್ ಸೈನ್ಸ್ ಕಾಲೇಜು, ಮುಡಿಪು, ಇವರು ಗೌರವ ಆತಿಥಿಗಳಾಗಿ ಮತ್ತು ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಡಾ.ಗುರುರಾಜ ಹೆಚ್, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.