ಬಂಟ್ವಾಳ ತಾಲೂಕಿನ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿವೇಕ ತರಗತಿ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಕ್ಕೆ ಜ.13ರಂದು ಬೆಳಿಗ್ಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ ನೀಡಿದರು.

ವೇ| ಮೂ| ಕೃಷ್ಣರಾಜ ಭಟ್ ಕರ್ಬೆಟ್ಟು ಧ್ವಜಾರೋಹಣ ಮಾಡಿ, ಪ್ರತಿಭೆಗಳು ಬದುಕ್ಕನ್ನು ರೂಪಿಸಲು ಸಹಕಾರಿ ಆಗಿದೆ ಎಂದರು.

ಬಳಿಕ ಶಾಲಾ ದೈಹಿಕ ಶಿಕ್ಷಕಿ ಶೋಭಾ ಮಾರ್ಗದರ್ಶನದಲ್ಲಿ ಮಕ್ಕಳಿಂದ ಆಕರ್ಷಕ ತಾಳಬದ್ದ ವ್ಯಾಯಾಮ ಹಾಗೂ ಅಮೋಘ ಕಸರತ್ತುಗಳು ನಡೆಯಲಿತು.

ನಂತರ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನರಿಕೊಂಬು ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ, ಪ್ರವೀಣ್ ಸ್ವಾಮೀಜಿ, ತೆಂಗು ಉತ್ಪಾದಕರ ಸೌಹಾರ್ದ ಸಂಘದ ನಿರ್ದೇಶಕ ಪ್ರೇಮನಾಥ್ ಶೆಟ್ಟಿ ಅಂತರ, ಸತ್ಯದೇವತ ಚಾರಿಟೇಬಲ್ ಟ್ರಸ್ಟ್ ನರಿಕೊಂಬಿನ ಅಧ್ಯಕ್ಷ ಹರೀಶ್ ಕುರ್ಚಿಪಲ್ಲ, ವಿಜಯಲಕ್ಷ್ಮಿ ಯುವಕ ಸಂಘದ ಅಧ್ಯಕ್ಷ ಜಗದೀಶ್ ಬೋರುಗುಡ್ಡೆ, ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಸಿ, ನಿವೃತ್ತ ಹಿರಿಯ ಮೇಲ್ವಿಚಾರಕಿ ಪುಷ್ಪಲತಾ, ಗ್ರಾಮ ಕರನಣಿಕ ಯಶ್ವಿತಾ, ಬೊಂಡಲ ಶಾಲಾ ಮುಖ್ಯ ಶಿಕ್ಷಕ ಕಮಲಾಕ್ಷ, ನಿವೃತ ಶಿಕ್ಷಕ ನಾರಾಯಣ ನಾಯ್ಕ್, ಇನ್ಫೋಸಿಸ್ ಮಂಗಳೂರಿನ ರೀಮಾ ಮದುರಾಜ್, ಶಿವರಂಜಿನಿ ಕಲಕೇಂದ್ರ ಬೊಕ್ಕಸದ ಸಂಚಾಲಕಿ ಶಾರದಾ ಬೊಕ್ಕಸ, ಓಂ ಶ್ರೀ ಗೆಳೆಯರ ಬಳಗ ನಾಯಿಲ ಅಧ್ಯಕ್ಷ ಪ್ರವೀಣ್ ಬಂಡಾರಿ , ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ಗೌರವಾಧ್ಯಕ್ಷ ದಿನೇಶ್ ಪಂಡಿತ್ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಪ್ರೇಮ ಎ ಸ್ವಾಗತಿಸಿ, ಸಹ ಶಿಕ್ಷಕಿ ಹಿರ್ಮಯಿ ವಂದಿಸಿ, ಶಿಕ್ಷಕಿ ವಿಲ್ಮಾ ಪ್ರೆಸಿಲ್ಲಾ ಪಂಟೋ ಕಾರ್ಯಕ್ರಮ ನಿರೂಪಿಸಿದರು.

ಶಾಲಾ ಶಿಕ್ಷಕರು ಹಾಗೂ ಶಾಲಾಭಿವ್ಧಿ ಸಮಿತಿಯ ಸದಸ್ಯರುಗಳು ಸಹಕರಿಸಿದರು.