ಪಂಡಿತ್ ದೀನ್ ದಯಾಳ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ಬಂಟ್ವಾಳ ಬಿ.ಜೆ.ಪಿ ಹಿಂದುಳಿದ ವರ್ಗ ಮೋರ್ಚಾದ ವತಿಯಿಂದ ನರಿಕೊಂಬು ಗ್ರಾಮದ ನಾಯಿಲ ಕೊಂಗಲಪಾದೆ ಎಂಬಲ್ಲಿ ಹಿಂದೂ ರುದ್ರ ಭೂಮಿಯ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಈ ಸ್ವಚ್ಚತಾ ಕಾರ್ಯದಲ್ಲಿ ಬಂಟ್ವಾಳ ಹಿಂದುಳಿದ ಮೋರ್ಚಾಗಳ ಅಧ್ಯಕ್ಷರಾದ ಯಶೋದರ ಕರ್ಬೆಟ್ಟು ಪ್ರಧಾನ ಕಾರ್ಯದರ್ಶಿ ಯಾದ ಮೋಹನ್ ದಾಸ್ ಕೊಟ್ಟಾರಿ ಉಪಾಧ್ಯಕ್ಷರು ಗಳಾದ ಅಶೋಕ ದೀನೇಶ ವೀರಕಂಬ ಮಾರ್ದೋಲಿ ಗೋಪಾಲ ಕರಿಯಂಗಳ ಕೋಶಾಧಿಕಾರಿ ಪುನೀತ್ ಕಲ್ಲಡ್ಕ ಬಿಜೆಪಿ ಪ್ರಮುಖರಾದ ಆನಂದ ಶಂಭೂರು ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ ಅರುಣ್ ಬೋರುಗುಡ್ಡೆ ಪ್ರಮುಖರಾದ ರಂಜಿತ್ ಮಣಿಮಜಲ್, ಪ್ರಭಾಕರ ಮಾರ್ದೋಲಿ, ಸತೀಶ ನಾಯಿಲ ವಿಜಯ ನಾಯಿಲ , ರಶೀತ್ ಬಿ.ಸಿ.ರೋಡ್, ಸೃಜನ್ ಮೈರನ್ ಪಾದೆ ಮೊದಲಾದ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.