ಬಂಟ್ವಾಳ : ಪ್ರಾಥಮಿಕ ಶಾಲೆಗಳು ಶಿಸ್ತನ್ನು ಕಲಿಸುವ ಮೂಲಕ ಮಕ್ಕಳಲ್ಲಿ ಸಾಧನೆ ದಾರಿಯನ್ನು ತೋರಿಸುತ್ತದೆ. ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಾ ಬೆಳೆಯುತ್ತಿದೆ. ಸರಕಾರಿ ಶಾಲೆಯನ್ನು ಕೀಳಾಗಿ ಕಾಣದೆ ಬದಲು ಹೆಮ್ಮೆ ಪಡುವಂತಾಗಬೇಕು ಎಂದು ಬಂಟ್ವಾಳ ಸಂಚಾರಿ ಠಾಣ ಪೊಲೀಸ್ ಉಪ ನಿರೀಕ್ಷಕರಾದ ಸುತೇಶ್ ಕೆ. ಪಿ. ಹೇಳಿದರು.
ಅವರು ಶನಿವಾರ ಬಂಟ್ವಾಳ ತಾಲೂಕಿನ ಧಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಧ್ವಜಾರೋಹಣ ಮಾಡುವ ಮೂಲಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿಕ್ಷಣ ಇಲಾಖೆ ವತಿಯಿಂದ ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೆ ನಿರ್ಮಿಸಿದ ಪ್ಲೇ ಏರಿಯಾ ವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಅತಿಥಿಗಳಾಗಿ ನರಿಕೊಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹಿನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ ಎ, ಗ್ರಾಮ ಲೆಕ್ಕಿಗರಾದ ಅಥಿಕ್ ಪೂಜಾರಿ, ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಪ್ರಸಾದ್ ರೈ, ಬಿಸಿ ರೋಡ್ ರಾಜಲಕ್ಷ್ಮಿ ಟೆಕ್ಸ್ಟೈಲ್ ಮಾಲಕ ರಾಜೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಮಮತಾ ಸಂತೋಷ್, ಸೇವಾ ಪ್ರತಿನಿಧಿ ಪ್ರತಿಭಾ ವಸಂತ್,ಮೆನೇಜಸ್ ವುಡ್ ವರ್ಕ್ಸ್ ನರಿ ಕೊಂಬು ಮಾಲಕ ಅಲ್ಬರ್ಟ್ ಮಿನೇಜೆಸ್, , ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ಕಾರ್ಯದರ್ಶಿ ಸಂತೋಷ್ ಕುಮಾರ್, ಪಿಡಬ್ಲ್ಯೂ ಕಂಟ್ರಾಕ್ಟರ್ ಪಿ ಎಸ್ ಅಬ್ದುಲ್ ಲತೀಫ್, ಶಂಬೂರ್ ಶಾಲಾ ನಿವೃತ್ತ ಶಿಕ್ಷಕ ಶಂಕರ್ ನಾರಾಯಣ ರಾವ್, ವಿಜಯಲಕ್ಷ್ಮಿ ಯುವಕ ಸಂಘ ನರಿಕೊಂಬು ಅಧ್ಯಕ್ಷ ಹರೀಶ್ ಟೈಲರ್, ವೀರಮಾರುತಿ ವ್ಯಾಯಾಮ ಶಾಲೆ ಮಾರುತಿ ನಗರ ಅಧ್ಯಕ್ಷ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.
ಸಂಜೆ ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್( ರಿ.) ಮಂಗಳೂರು ಇದರ ಯಕ್ಷದ್ರುವ ಯಕ್ಷ ಶಿಕ್ಷಣ ಕಾರ್ಯಕ್ರಮದಡಿ ಶಿಕ್ಷಕರಾದ ಓಂ ಪ್ರಕಾಶ್ ಇವರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳಿಂದ ” ಶಶಿ ಪ್ರಭಾ ಪರಿಣಯ ” ಯಕ್ಷಗಾನ ಪ್ರಸಂಗ ಜರಗಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕಿ ಪುರಸ್ಕೃತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶೋಭಾ, ಸಾಧಕ ಹಿರಿಯ ವಿದ್ಯಾರ್ಥಿಗಳಾದ ಅನಂತೇಶ್ ಎಲ್, ದೀಕ್ಷಿತಾ ಬೋರುಗುಡ್ಡೆ, ಕವನ ಪೈ, ಇವರುಗಳನ್ನು ಶಾಲಾ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಪರವಾಗಿ ತಾಲೂಕು ಮಟ್ಟ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ನರಿಕೊಂಬು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ ಎ ಎಸ್ ಶಾಲಾ 2024 25 ಸಾಲಿನ ವರದಿ ವಾಚಿಸಿ, ಸಹ ಶಿಕ್ಷಕಿ ದಿವ್ಯಶ್ರೀ ವಂದಿಸಿ, ಶಿಕ್ಷಕಿ ವಿಲ್ಮಾ ಪ್ರೆಸಿಲ್ಲಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿಗೆ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು, ತಾಯಂದಿರ ಸಮಿತಿಯ ಅಧ್ಯಕ್ಷೆ ಜಯಶ್ರೀ ಹಾಗೂ ಸದಸ್ಯರು, ಶಾಲಾ ಶಿಕ್ಷಕ ವೃಂದ ಸಹಕರಿಸಿದರು.