ನರಿಕೊಂಬು ಗ್ರಾಮದ ಪೊಯಿತ್ತಾಜೆ, ಎರಮಲೆ ಭಗವಾನ್ ಶ್ರೀ ಕೋದಂಡರಾಮ ಭಜನಾ ಮಂದಿರದ 60ನೇ ವಾರ್ಷಿಕೋತ್ಸವದ ಅಂಗವಾಗಿ ಜ.7ರಂದು ಮಂದಿರದ ಸಭಾ ಭವನದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು.
ಶ್ರೀ ಸತ್ಯಸಾಯಿ ಬಾಲ ವಿಕಾಸ ಕೇಂದ್ರ ಮಂಗಳದೇವಿ ಇದರ ಸಹಯೋಗದೊಂದಿಗೆ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ ಶಿಬಿರ ಮತ್ತು ದೇರಳಕಟ್ಟೆ ಯೆನಪೋಯ ದಂತ ಆಸ್ಪತ್ರೆಯ ವೈದ್ಯ ತಂಡದಿಂದ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಸಿಕೊಟ್ಟರು.
ಶಿಬಿರದಲ್ಲಿ ಚರ್ಮ, ಎಲುಬು, ಕಣ್ಣು, ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ, ಕಿವಿ, ಮೂಗು, ಗಂಟಲು, ಸ್ತ್ರೀ ರೋಗ ಚಿಕಿತ್ಸೆ , ಮಕ್ಕಳ ಚಿಕಿತ್ಸೆ , ಜನರಲ್ ಚಕ್ ಆಪ್, ಇಸಿಜಿ ತಪಾಸಣೆ, ದಂತ ಚಿಕಿತ್ಸೆ ಮತ್ತು ತಪಾಸಣೆ ನಡೆಸಲಾಯಿತು. ಅಗತ್ಯ ಉಳ್ಳವರಿಗೆ ಕನ್ನಡಕ ವಿತರಿಸಲಾಯಿತು. ಗ್ರಾಮದ ಅನೇಕರು ಇದರ ಸದುಪಯೋಗ ಪಡೆದುಕೊಂಡರು.